ವೀರಶೈವ ಲಿಂಗಾಯತ ನೌಕರರ ಸಹಕಾರಿ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ವೀರಶೈವ ಲಿಂಗಾಯತ ನೌಕರರ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಎಂ.ಬಿ.ಬಳ್ಳಾರಿ, ಉಪಾಧ್ಯಕ್ಷರಾಗಿ ಎಸ್. ಎ. ಸಾರಂಗಮಠಆಯ್ಕೆ

By Petkarmedia News Desk|Bagalkot

ಬಾಗಲಕೋಟೆ: ನೂತನವಾಗಿ ಆರಂಭಗೊಂಡಿರುವ ವೀರಶೈವ ಲಿಂಗಾಯತ ಸರ್ಕಾರಿ ಹಾಗೂ ನಿವೃತ್ತ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಈಚೆಗೆ ನಡೆಯಿತು.

ಸಂಘದ ಎಲ್ಲಾ ನಿರ್ದೇಶಕರ ಸಮ್ಮುಖದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ನೌಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬಿ. ಬಳ್ಳಾರಿ ಅವರನ್ನು ಅಧ್ಯಕ್ಷರಾಗಿ ಹಾಗೂ ಶ್ರೀ ಎಸ್. ಎ. ಸಾರಂಗಮಠ ಅವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ಶ್ರೀ ವೈ. ಬಿ. ತೋಟಗಿ ತಿಳಿಸಿದ್ದಾರೆ.

ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ ಅವರು, ಸಂಘದ ಅಭಿವೃದ್ಧಿಗೆ ಸದಸ್ಯರ ಸಹಕಾರ ಅತ್ಯಗತ್ಯವಾಗಿದ್ದು, ನೌಕರರ ಕಲ್ಯಾಣ ಹಾಗೂ ಆರ್ಥಿಕ ಬಲವರ್ಧನೆಗಾಗಿ ಸಂಘವನ್ನು ಸಶಕ್ತವಾಗಿ ನಡೆಸುವುದಾಗಿ ಹೇಳಿದರು. ಉಪಾಧ್ಯಕ್ಷರಾದ ಸಾರಂಗಮಠ ಅವರು ಸಹ ಸಂಘದ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬೆಳವಣಿಗೆಗೆ ಶ್ರಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಸುರೇಶ ಇಂಜಗನೇರಿ, ಮಹಾಂತೇಶ ಅಂಗಡಿ, ಶಂಕರಗೌಡ ಹಿರೇಗೌಡರ, ಮಹಾಂತೇಶ ಕೋಟಿ, ಆನಂದ ಹಲಕುರ್ಕಿ, ಮಲ್ಲಿಕಾರ್ಜುನ ಕವಟಕೊಪ್ಪ, ಗೌಡಪ್ಪಗೌಡ ಬಿರಾದರ, ಪ್ರಕಾಶ ಕೋಟಿ, ಶಿವಪ್ಪ ದರಗಾದ, ಪ್ರಕಾಶ ಯರಗಟ್ಟಿ, ನಾಗರಾಜ ಕುಂಬಾರ, ನೀಲಮ್ಮ ನಾಯನಾಗಲಿ, ದೇವಕ್ಕ ಹಕ್ಕಂಡಿ, ಮಹಾಂತೇಶ ನಿಡಸನೂರ ಹಾಗೂ ಡಾ. ಅರುಣ ಗಾಳಿ ಉಪಸ್ಥಿತರಿದ್ದರು.

ಇದೇ ವೇಳೆ ಸಂಸ್ಥೆಯ ಕಾರ್ಯನಿರ್ವಾಹಕರಾಗಿ ಕಲ್ಲಪ್ಪ ಗುಡದಿನ್ನಿ ಹಾಗೂ ಕಚೇರಿ ಸಹಾಯಕರಾಗಿ ಮಹದೇವಪ್ಪ ಹುನಗುಂದ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಉಪಾಧ್ಯಕ್ಷ ಶ್ರೀ ಎಸ್. ಎ. ಸಾರಂಗಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳು