ಬಡ ಜನರ ಏಳಿಗೆಗೆ ಕಾಂಗ್ರೆಸ್ ಬದ್ಧ:ಎಸ್.ಜಿ.ನಂಜಯ್ಯನಮಠ
By Petkarmedia news desk: Bagalkot
ಬಾಗಲಕೋಟೆ: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಬಡ ಜನತೆಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.
ನಗರದ ಕಿಲ್ಲಾ ಭಾಗದಲ್ಲಿ ಶನಿವಾರ ಬೆಳಗ್ಗೆ ಪಕ್ಷದ ಪರ ಪ್ರಚಾರ ಕೈಗೊಂಡು ಅವರು ಮಾತನಾಡಿದರು. ಸರಳ ಸ್ವಭಾವ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಳಕಳಿಯಿಂದ ಎಚ್.ವೈ.ಮೇಟಿ ಅವರು ಅಪಾರ ಜನರ ಪ್ರೀತಿ ಗಳಿಸಿದ್ದಾರೆ. ನಗರದಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಆಗಬೇಕೆಂಬ ಅವರ ಕನಸು ಕೂಡ ನನಸಾಗಲಿದೆ. ಪಕ್ಷದ ಅಭ್ಯರ್ಥಿ ಉಮೇಶ ಮೇಟಿ ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದು ವಿನಂತಿಸಿದರು.
ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ನುಡಿದಂತೆ ನಡೆದು ಸಮಗ್ರ ಅಭಿವೃದ್ಧಿಗೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲ ಮತದಾರರು ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿ ಕೈ ಬಲಪಡಿಸಬೇಕು ಎಂದರು.
ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ, ನಾಗರಾಜ ಹದ್ಲಿ ಮಾತನಾಡಿದರು. ಮಲ್ಲಿಕಾರ್ಜುನ ಮೇಟಿ, ಸಂತೋಷ ಹೊಕ್ರಾಣಿ, ಶಿವಕುಮಾರ ನಂದಿಕೋಲಮಠ, ಅಬ್ದುಲರಜಾಕ್ ಬೇನೂರ, ಅಕ್ಬರ್ ಮುಲ್ಲಾ, ಜಾಫರ್ ಬೇಪಾರಿ, ಪ್ರೇಮಾ ಗರಸಂಗಿ, ಇಬ್ರಾಹಿಂ ಕಲಾದಗಿ, ಅಯೂಬಖಾನ್ ಪುಣೇಕರ್, ಹಣಮಂತ ರಾಕುಂಪಿ, ರೇಣುಕಾ ನ್ಯಾಮಗೌಡ, ಮಂಜುಳಾ ಭುಸಾರೆ, ಮಮತಾ ಸುತಾರ, ಸುಧಾ ಪಾಟೀಲ, ಭರತ ಈಟಿ, ವೀರೇಶ ಹುಂಡೇಕಾರ, ಖಾಜಿಸಾಬ್ ದಂಡೀನ, ಲಕ್ಷ್ಮೀ ಚೌಹಾಣ್, ವಿಜಯ ಕಮತಗಿ, ಕಲ್ಪನಾ ಮೇಟಿ, ಅನ್ನಪೂರ್ಣಾ ಗೂಗುಹಾಳ, ಗುಣವಂತಿ ನಿಡೋಣಿ, ಬಸವರಾಜ ಅಂಬಿಗೇರ, ಮಂಜು ಮುಚಖಂಡಿ, ರಮೇಶ ಪಡಸಲಗಿ, ಪ್ರೇಮಾ ರಾಠೋಡ ಇತರರು ಇದ್ದರು.
*ಕಾಂಗ್ರೆಸ್ ಸೇರ್ಪಡೆ*
ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ನೂರಾರು ಯುವಕರು ಶನಿವಾರ ಕಾಂಗ್ರೆಸ್ ಸೇರ್ಪಡೆಯಾದರು. ಬೇವೂರ ಗ್ರಾಮದಲ್ಲಿ ಶರೀಫ್ ಅಮರಾವತಿ, ಪರಶುರಾಮ ಐಹೊಳ್ಳಿ, ಸಂಗಪ್ಪ ಬಂಟರ, ಹನಮಂತ ಬೀಳಗಿ, ಫಕೀರಪ್ಪ ಮುಳ್ಳೂರ, ಸಿದ್ದಪ್ಪ ಕಿರಸೂರ, ಕರಿಯಪ್ಪ ಗವಿ, ನೀಲಪ್ಪ ಬಾಲನಾಯಕ, ಪೀರಸಾಬ್ ಕಡ್ಲಿಮಟ್ಟಿ, ಅಬ್ದುಲ್ ನದಾಫ್, ಯಮನೂರಿ ನಾಯ್ಕರ್, ಹಳ್ಳೂರು ಗ್ರಾಮದಲ್ಲಿ ಮುತ್ತಪ್ಪ ಜಿಗಳೂರ, ಮಲ್ಲು ಹೊರಪ್ಯಾಟಿ, ಸಿದ್ದು ಮಾದರ, ಬಸು ಹಡಗಲಿ, ಸಿದ್ದಪ್ಪ ಚಲವಾದಿ, ಶಂಕ್ರಪ್ಪ ಕರರಡ್ಡಿ, ಮಹಿಬೂಬ್ ಕಾಶಿನಕುಂಟಿ, ಬಸು ದಳವಾಯಿ ಇತರರು ಕಾಂಗ್ರೆಸ್ ಸೇರ್ಪಡೆಯಾದರು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ