ಬೀಳಗಿ:ಹೋಳಿ ಹಬ್ಬ ಸಾಮರಸ್ಯದಿಂದ ಆಚರಿಸಿ: ಸಿಪಿಐ ಸಣಮನಿ, ತಹಸೀಲ್ದಾರ್ ಹತ್ತಳ್ಳಿ ಕರೆ

ಬೀಳಗಿ: ಹೋಳಿ ಹಬ್ಬವನ್ನು ಸಾಮರಸ್ಯ ಮತ್ತು ಸೌಹಾರ್ದದಿಂದ ಆಚರಿಸಬೇಕು. ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸಿಪಿಐ ಹಣಮಂತ ಸಣಮನಿ ಹಾಗೂ ತಹಸೀಲ್ದಾರ್ ವಿನೋದ ಹತ್ತಳ್ಳಿ ಕರೆ ನೀಡಿದರು.

ಪಟ್ಟಣದ ಬೀಳಗಿ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ ಹೋಳಿ ಹಾಗೂ ರಂಜಾನ್ ಶಾಂತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

“ಬೇರೆಯವರಿಗೆ ತೊಂದರೆ ಆಗದಂತೆ ಹೋಳಿ ಹಬ್ಬವನ್ನು ಆಚರಿಸಬೇಕು. ಪಿಯು ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಯಾವುದೇ ಅಡಚಣೆ ಆಗದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕು” ಎಂದು ತಿಳಿಸಿದರು.

ಸಭೆಯಲ್ಲಿ ರಾಜು ಬೋರ್ಜಿ, ಮುತ್ತು ಬೋರ್ಜಿ, ಸಂಗಪ್ಪ ಗಾಳಿ, ನಿಂಗಪ್ಪ ದಂದರಗಿ, ಶಿವನಗೌಡ ಪಾಟೀಲ, ಸಿದ್ದು ಮಾದರ, ಹಾಸಿಂಪೀರ ಮುಜಾವರ ಹಾಗೂ ಮಂಜುಳಾ ಮೇರಾಕರ ಮಾತನಾಡಿದರು.

ಈ ಸಂದರ್ಭದಲ್ಲಿ ಮಹಾದೇವ ಬೋರ್ಜಿ, ಸಿದ್ದಪ್ಪ ಮೇಟಿ, ಅಜ್ಜು ಬಾಯಿ ಸರ್ಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು