ಉಪಚುನಾವಣೆ ಸಿದ್ಧತೆ ಗರಿಗೆದರಿದ ಕಾಂಗ್ರೆಸ್: ಬಾಗಲಕೋಟೆಯಲ್ಲಿ ವಾರ್ ರೂಂ ಉದ್ಘಾಟನೆ
By Petkarmedia news Desk| Bagalkot
ಬಾಗಲಕೋಟೆ, ಮಾರ್ಚ್ 26: ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ. ತಿಮ್ಮಾಪೂರ ಅವರು ಗುರುವಾರ ವಿವಿಧ ಸಮಿತಿಗಳ ಸಭೆ ನಡೆಸಿದರು.
ಉಪಚುನಾವಣೆಯ ಹಿನ್ನೆಲೆಯಲ್ಲಿ ಬೂತ್ ಮಟ್ಟದ ಸಿದ್ಧತೆ, ಪ್ರಚಾರ ತಂತ್ರಗಳು ಹಾಗೂ ಸಮಿತಿಗಳ ಕಾರ್ಯಯೋಜನೆಗಳ ಕುರಿತು ಸಭೆಯಲ್ಲಿ ವಿವರವಾದ ಚರ್ಚೆ ನಡೆಯಿತು. ಬಳಿಕ ಸಚಿವರು ಕಾಂಗ್ರೆಸ್ ವಾರ್ ರೂಂ ಅನ್ನು ಉದ್ಘಾಟಿಸಿದರು.
ವಾರ್ ರೂಂ ಉದ್ಘಾಟನೆಯ ನಂತರ ಮಾತನಾಡಿದ ತಿಮ್ಮಾಪೂರ ಅವರು, “ಉಪಚುನಾವಣೆಯಲ್ಲಿ ಪ್ರತಿಯೊಂದು ಬೂತ್‌ನಲ್ಲಿ ನಾವು ಬಲವಾಗಿ ನಿಲ್ಲಬೇಕು. ವಾರ್ ರೂಂ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಗೆಲುವಿಗೆ ದಾರಿ ಮಾಡಿಕೊಡುತ್ತದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ್, ಭಾರತ ರಾಷ್ಟ್ರೀಯ ಮಜೂರ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ತೌಫಿಕ್ ಪಾರ್ಥನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ