ಮನೆ ಮನೆ ಪಾದಯಾತ್ರೆ ಮೂಲಕ ಬಿಜೆಪಿ ಮತಯಾಚನೆ:
By Petkarmedia news desk| Bagalkot
ಬಾಗಲಕೋಟೆ: ಅಭಿವೃದ್ಧಿಪರ ಇರುವ ಬಾಗಲಕೋಟೆ ಜನರ ನಂಬಿಕೆ ಮತ್ತು ವಿಶ್ವಾಸ ಬಿಜೆಪಿಯನ್ನು ಗೆಲ್ಲಿಸುತ್ತದೆ ಈ ಬಾರಿ ದೊಡ್ಡ ಅಂತರದಲ್ಲಿ ಗೆಲುವಾಗಲಿದೆ ಎಂದು ಬಿಜೆಪಿ ಅಭ್ಯರ್ಥಿ ಡಾ. ವೀರಣ್ಣ ಚರಂತಿಮಠ ಹೇಳಿದರು.
ಉಪಚುನಾವಣೆಯ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಬಾಗಲಕೋಟೆ ನಗರದಲ್ಲಿ ಗುರುವಾರ ಪಾದಯಾತ್ರೆ ನಡೆಸಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಾಯಿತು. ನಗರದ ಗಜಾನನ ದೇವಸ್ಥಾನದಿಂದ ಆರಂಭವಾದ ಪಾದಯಾತ್ರೆ ಸಾಗರ ಬಂಡಿಯವರ 5ನೇ ವಾರ್ಡ್ ಹಾಗೂ ಶಶಿಕಲಾ ಮಜ್ಜಗಿಯವರ 7ನೇ ವಾರ್ಡ್ ವ್ಯಾಪ್ತಿಯ ಜೈನಪೇಟೆ, ಬಾದೋಡಗಿ ಛಾಳ, ನಾರಾ ಸಂದಿ, ಶಂಕಲಿಂಗ ಗುಡಿ, ಕುಂಬಾರ ಮಡುವು ಪ್ರದೇಶಗಳಲ್ಲಿ ಪಾದಯಾತ್ರೆಯ ಮೂಲಕ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದ ಅವರು, “ಬೆಳ್ಳಂಬೆಳಗ್ಗೆಯಿಂದಲೇ ಪ್ರಚಾರಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಎರಡು ವಾರ್ಡ್‍ಗಳಲ್ಲಿ ನಡೆದ ಪಾದಯಾತ್ರೆಗೆ ಜನರಿಂದ ಉತ್ತಮ ಉತ್ಸಾಹ ವ್ಯಕ್ತವಾಗಿದೆ. ಏಪ್ರಿಲ್ 9ರಂದು ನಡೆಯುವ ಮತದಾನದಲ್ಲಿ ಬಿಜೆಪಿ ಪರವಾಗಿ ಮತ ಹಾಕಲು ಜನರು ಸಿದ್ಧರಾಗಿದ್ದಾರೆ. ಅಭಿವೃದ್ಧಿಪರ ಇರುವ ಬಾಗಲಕೋಟೆ ಜನರ ನಂಬಿಕೆ ಮತ್ತು ವಿಶ್ವಾಸ ಬಿಜೆಪಿಯನ್ನು ಗೆಲ್ಲಿಸುತ್ತದೆ, ಬಾಗಲಕೋಟೆಯಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಹಲವಾರು ನಾಯಕರು ಪ್ರಚಾರಕ್ಕೆ ಆಗಮಿಸಲಿದ್ದು, ಪಕ್ಷ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿದೆ ಎಂದು ಅವರು ಹೇಳಿದರು.
ಮತಯಾಚನೆಯಲ್ಲಿ ದೇವರಾಜ ಪಾಟೀಲ, ರಾಜು ನಾಯ್ಕರ, ಬಸವರಾಜ ಕಟಗೇರಿ, ದುಂಡಪ್ಪ ಏಳಮ್ಮಿ, ಸಂಗಯ್ಯ ಸರಗಣಾಚಾರಿ, ಮಂಜುನಾಥ ಏಳಮ್ಮಿ, ಮಲ್ಲು ಭಾಳಪ್ಪ£ನ್ನವರ, ಜ್ಞಾನೇಶ್ವರ ಕಪಾಟೆ, ದೂಳಪ್ಪ ಯಳ್ಳಿಗುತ್ತಿ, ಮಲ್ಲು ಗಿರಿಗಾಂವಿ, ಬಂಡಪ್ಪ ಏಳಮ್ಮಿ, ಪ್ರಮೋಧ ಅಂಭಿಗೇರ, ನಗರಸಭೆ ಸದಸ್ಯೆ ಶಶಿಕಲಾ ಮಜ್ಜಗಿ, ಬಸಪ್ಪ ಯಳ್ಳಿಗುತ್ತಿ, ಅಮಾತೆಪ್ಪ ಮಂಕಣಿ, ಗೋಪಾಲ ಕಟ್ಟಿಮನಿ, ಅಶೋಕ ಕಲಾಲ, ಸುರೇಶ ಮಜ್ಜಗಿ, ರೇಣುಕಾ ಬಡಿಗೇರ, ನಾಗರತ್ನಾ ಹಡಗಲಿ,ಸವಿತಾ ಗಡ್ಡಿಮಠ,ಶಿವಲೀಲಾ ಹಿರೇಮಠ, ಲಕ್ಷ್ಮೀ ಜಿಂಗಾಡೆ, ಸಾಗರ ಬಂಡಿ, ಸದಾನಂದ ನಾರಾ, ಈಶ್ವರ ಸುಗಂದಿ, ಸೇರಿದಂತೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ