ಬಾಗಲಕೋಟೆ ಉಪಚುನಾವಣೆ: ಮೇಟಿ ಕುಟುಂಬದ ಭಾವನೆ vs ಕಾಂಗ್ರೆಸ್ ಟಿಕೆಟ್ ರಾಜಕೀಯ – ಯಾರು ಗೆಲ್ಲುತ್ತಾರೆ?

ಒಂದು ಟಿಕೆಟ್, ಮೂರು ದಾರಿಗಳು: ಬಾಗಲಕೋಟೆಯಲ್ಲಿ ಕಾಂಗ್ರೆಸ್ ಗೊಂದಲ | ಕಾಂಗ್ರೆಸ್ ಒಳಜಗಳ: ಗೆಲುವು ಕೈತಪ್ಪಿಸುವ ಭೀತಿ?

By Petkarmedia news Desk| ಬಾಗಲಕೋಟೆ 

ರಾಜ್ಯ  ರಾಜಕೀಯದಲ್ಲಿ ಬಾಗಲಕೋಟ ಉಪಚುನಾವಣೆ ಇದೀಗ ತೀವ್ರ ಕುತೂಹಲದ ಹಂತ ತಲುಪಿದೆ. ಹಿರಿಯ ನಾಯಕ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾದ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆ, ಈಗ ಕೇವಲ ಒಂದು ಚುನಾವಣೆಯಲ್ಲ — ಅದು ಭಾವನೆ, ಕುಟುಂಬ, ಕಾರ್ಯಕರ್ತರು ಮತ್ತು ಹೈಕಮಾಂಡ್ ನಡುವಿನ ನಿಜವಾದ ರಾಜಕೀಯ ಪರೀಕ್ಷೆಯಾಗಿದೆ. 

 “ತಂದೆ ಪ್ರತಿದಿನ ನೆನಪಾಗುತ್ತಾರೆ…” – ಪುತ್ರರ ಮನದಾಳದ ಮಾತು ಖಾಸಗಿ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಮೇಟಿ ಮತ್ತು ಉಮೇಶ್ ಮೇಟಿ, ತಮ್ಮ ತಂದೆಯ ನೆನಪುಗಳನ್ನು ಭಾವುಕರಾಗಿ ಹಂಚಿಕೊಂಡರು. 

“ಡೈಲಿ ನೆನಪಾಗುತ್ತಾರೆ ರೀ… ದೇವರ ಇಚ್ಛೆ” , “ಅವರು ಅಜಾತ ಶತ್ರು… ನಾಲ್ಕು ದಶಕಗಳ ಸೇವೆ ಮಾಡಿದವರು” ಎಚ್.ವೈ. ಮೇಟಿ ಅವರು ಕೇವಲ ರಾಜಕಾರಣಿಯಲ್ಲ — ಗ್ರಾಮೀಣ ಜನರ ಹೃದಯದಲ್ಲಿ ನೆಲೆಸಿದ ನಾಯಕರು. ಸಚಿವರಾಗಿದ್ದರೂ ಗ್ರಾಮದಲ್ಲೇ ವಾಸ್ತವ್ಯ, ದಿನಕ್ಕೆ ನೂರಾರು ಕಿಲೋಮೀಟರ್ ಸಂಚಾರ ಮಾಡಿ ಜನರ ಸಮಸ್ಯೆ ಕೇಳುವುದು — ಇದು ಅವರ ವೈಶಿಷ್ಟ್ಯ. 

ಗ್ರಾಮೀಣ ಅಂಟು – ಮೇಟಿ ಅವರ ಶಕ್ತಿ: ಮೇಟಿ ಅವರ ರಾಜಕೀಯ ಯಶಸ್ಸಿನ ಮೂಲವೇ ಗ್ರಾಮೀಣ ಸಂಪರ್ಕ.

 ✔️ ಕುಡಿಯುವ ನೀರಿನ ಯೋಜನೆ

 ✔️ ಅಭಿವೃದ್ಧಿ ಕಾಮಗಾರಿಗಳು 

✔️ ಎಲ್ಲ ವರ್ಗಗಳೊಂದಿಗೆ ಸಮಾನತೆ 

“ಜನರು ನನ್ನ ಹೃದಯದಲ್ಲಿದ್ದಾರೆ” ಎಂಬ ಭಾವನೆ ಅವರಲ್ಲಿ ಸದಾ ಇತ್ತು. ಇದೇ ಕಾರಣಕ್ಕೆ ಅವರು ಐದು ಬಾರಿ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದರು. 

ಮೆಡಿಕಲ್ ಕಾಲೇಜ್’ – ಕೊನೆಯ ಕನಸು :

ಈ ಬಾರಿ ಉಪಚುನಾವಣೆಯ ಪ್ರಮುಖ ವಿಷಯ, ಮೆಡಿಕಲ್ ಕಾಲೇಜ್ ಯೋಜನೆ ಇದು ಮೇಟಿ ಅವರ ಕನಸಿನ ಕೂಸು. “ಬಡವರ ಭಾಗ್ಯವಾಗಬೇಕು, ಪಕ್ಷಾತೀತವಾಗಿ ಎಲ್ಲರೂ ಸ್ವೀಕರಿಸಬೇಕು” ಎಂದು ಅವರು ಬಯಸಿದ್ದರು. 

ಟಿಕೆಟ್ ಪ್ರಶ್ನೆ – ಕುಟುಂಬ vs ಪಕ್ಷ ಮೇಟಿ ಪುತ್ರರ ಸ್ಪಷ್ಟ ನಿಲುವು:

“ನಮ್ಮ ಕುಟುಂಬಕ್ಕೆ ಟಿಕೆಟ್ ಕೊಡಲೇಬೇಕು ಅಂತ ನಾವು ಅರ್ಜಿ ಹಾಕಿಲ್ಲ” 

✔️ “ಹೈಕಮಾಂಡ್ ತೀರ್ಮಾನ ಏನೇ ಆಗಿರಲಿ ನಾವು ಒಪ್ಪುತ್ತೇವೆ” 

✔️ “ಕಾರ್ಯಕರ್ತನಿಗೆ ಕೊಟ್ಟರೂ ಕಾಂಗ್ರೆಸ್ ಗೆಲ್ಲಿಸುತ್ತೇವೆ” ಇದು ಒಂದು ಕಡೆ ನಿಷ್ಠೆ, ಇನ್ನೊಂದು ಕಡೆ ರಾಜಕೀಯ ಪಕ್ವತೆ.

⚡ ಆದರೆ ಕುಟುಂಬದೊಳಗೆ ಬಂಡಾಯದ ಕಿಡಿ!

ಇನ್ನೊಂದೆಡೆ ಚಿತ್ರ ಬೇರೆಯಾಗಿದೆ ‌. ಮಹಾದೇವಿ ಮೇಟಿ – “ನನಗೆ ಟಿಕೆಟ್ ಕೊಡದಿದ್ದರೆ ಬಂಡಾಯವಾಗಿ ಸ್ಪರ್ಧಿಸುತ್ತೇನೆ”ಎನ್ನುತ್ತಾರೆ‌.

 ವೀಣಾ ಕಾಶಪ್ಪನವರ & ರಕ್ಷಿತಾ ಈಟಿ : “ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು” ಇದು ಕಾಂಗ್ರೆಸ್ ಒಳಗೆ ತ್ರಿಕೋನ ಹೋರಾಟ ಹುಟ್ಟುಹಾಕಿದೆ.  ಹೈಕಮಾಂಡ್ ಮುಂದೆ ದೊಡ್ಡ ಸವಾಲು ಕಾಂಗ್ರೆಸ್ ಎದುರಿಸುತ್ತಿರುವ

 ಪ್ರಶ್ನೆಗಳು: ? ಒಂದು ತಪ್ಪು ನಿರ್ಧಾರ — ಪಕ್ಷದ ಗೆಲುವಿನ ಮೇಲೆ ಪರಿಣಾಮ ಬೀರುತ್ತದೆ. 

 ರಾಜಕೀಯ ಸಮೀಕರಣ: ಭಾವನೆ vs ಗೆಲುವು ಈ ಉಪಚುನಾವಣೆ ಮೂರು ಅಂಶಗಳ ಮೇಲೆ ನಿಂತಿದೆ: 

1️⃣ ಸಹಾನುಭೂತಿ ಅಲೆ (Sympathy Factor) 

2️⃣ ಕುಟುಂಬ ಏಕತೆ ಅಥವಾ ಭಿನ್ನತೆ 

3️⃣ ಪಕ್ಷದ ತಂತ್ರ ಮತ್ತು ಅಭ್ಯರ್ಥಿ ಆಯ್ಕೆ 

ಜನರ ಪ್ರಶ್ನೆ – ಯಾರು ಗೆಲ್ಲಬೇಕು? : ಮೇಟಿ ಕುಟುಂಬದವರೇ?  ನಿಷ್ಠಾವಂತ ಕಾರ್ಯಕರ್ತರೇ?  ಅಥವಾ ಹೊಸ ಮುಖವೇ? ಬಾಗಲಕೋಟೆ ಜನರು ಈಗ ತೀರ್ಮಾನ ಮಾಡಲು ಸಜ್ಜಾಗಿದ್ದಾರೆ. 



✍️  ಈ ಚುನಾವಣೆ ಕೇವಲ ಟಿಕೆಟ್ ಹಂಚಿಕೆಯ ವಿಚಾರವಲ್ಲ.  ಕುಟುಂಬ ಒಗ್ಗಟ್ಟಿನಿಂದ ನಿಂತರೆ ಕಾಂಗ್ರೆಸ್ ಬಲವಾಗುತ್ತದೆ .ಒಳಜಗಳ ಹೆಚ್ಚಾದರೆ ವಿರೋಧಿಗಳಿಗೆ ಲಾಭ  ನಿಮ್ಮ ಅಭಿಪ್ರಾಯವೇನು? 

🗨️ ಕಾಮೆಂಟ್ ಮಾಡಿ: 👉 ಟಿಕೆಟ್ ಯಾರಿಗೆ ಕೊಡಬೇಕು? 👉 ಕಾಂಗ್ರೆಸ್ ಗೆಲುವಿಗೆ ಯಾರು ಸೂಕ್ತ ಅಭ್ಯರ್ಥಿ? 


📢 Follow: PetkarMedia.com 🔖 #BagalkoteByElection #HYMeti #CongressKarnataka #PoliticalDrama #KarnatakaPolitics #BreakingNews #PetkarMedia #ViralNews


ಕಾಮೆಂಟ್‌ಗಳು