ಪಿಯುಸಿ ಫಲಿತಾಂಶ : ರಾಜ್ಯದಲ್ಲಿ ಬಾಗಲಕೋಟೆಗೆ 21ನೇ ಸ್ಥಾನ| ಜಿಲ್ಲೆಯಲ್ಲಿ ಶೇ.84.12 ರಷ್ಟು ಪಿಯುಸಿ ಫಲಿತಾಂಶ*
By PetkarMedia news desk| Bagalkot
ಬಾಗಲಕೋಟೆ : ಪ್ರಸಕ್ತ 2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಪರೀಕ್ಷೆ ಬರೆದ 23647 ವಿದ್ಯಾರ್ಥಿಗಳ ಪೈಕಿ 19892 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ.84.12 ರಷ್ಟು ಫಲಿತಾಂಶ ಪಡೆದು ರಾಜ್ಯ ಮಟ್ಟದಲ್ಲಿ 21ನೇ ಸ್ಥಾನ ಪಡೆದುಕೊಂಡಿದೆ.
ಕಳೆದ 2025 ರಲ್ಲಿ ಶೇ.72.83 ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ 15ನೇ ಸ್ಥಾನ ಪಡೆದುಕೊಂಡಿತ್ತು. ಪ್ರಸಕ್ತ 2026 ರಲ್ಲಿ 21ನೇ ಸ್ಥಾನ ಪಡೆದುಕೊಂಡಿದೆ. ಆದರೆ ಫಲಿತಾಂಶದಲ್ಲಿ ಮಾತ್ರ ಹೆಚ್ಚಿಗೆ ಕಂಡುಬಂದಿರುತ್ತದೆ.
ಕಲಾ ವಿಭಾಗದಲ್ಲಿ 8544 ವಿದ್ಯಾರ್ಥಿಗಳ ಪೈಕಿ 6289 ಜನ ತೇರ್ಗಡೆ ಹೊಂದಿ, ಶೇ.73.61 ರಷ್ಟು ಫಲಿತಾಂಶವಾದರೆ, ವಾಣಿಜ್ಯ ವಿಭಾಗದಲ್ಲಿ 5016 ಪೈಕಿ 4399 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.87.70, ವಿಜ್ಞಾನ ವಿಭಾಗದಲ್ಲಿ 10087 ವಿದ್ಯಾರ್ಥಿಗಳ ಪೈಕಿ 9204 ವಿದ್ಯಾರ್ಥಿಗಳು ತೇರ್ಗಡೆಹೊಂದಿ ಶೇ.91.25 ರಷ್ಟು ತೇರ್ಗಡೆ ಹೊಂದಿದ್ದಾರೆ.
ಈ ಬಾರಿ ಫಲಿತಾಂಶದಲ್ಲಿ ಕಲಾ ವಿಭಾಗದಲ್ಲಿ ಗಂಡು ವಿದ್ಯಾರ್ಥಿಗಳು ಶೇ.56.88 ಕ್ಕಿಂತ ಶೇ.74.13 ರಷ್ಟು ಫಲಿತಾಂಶ ಪಡೆಯುವ ಮೂಲಕ ಮಹಿಳೆಯರು ಮೇಲುಗೈ ಸಾಧಿಸಿದರೆ, ವಾಣಿಜ್ಯ ವಿಭಾಗದಲ್ಲಿ ಪುರುಷರು ಶೇ.74.59 ಕ್ಕಿಂತ ಮಹಿಳೆಯರು ಶೇ.88.96 ರಷ್ಟು ಪಡೆಯುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಆದರೆ ವಿಜ್ಞಾನ ವಿಭಾಗದಲ್ಲಿ ಮಹಿಳಾ ವಿದ್ಯಾರ್ಥಿಗಳು ಶೇ.87.81 ರಷ್ಟು ತೇರ್ಗಡೆ ಹೊಂದಿದರೆ, ಪುರುಷ ವಿದ್ಯಾರ್ಥಿಗಳು ಶೇ.88.36 ರಷ್ಟು ತೆರ್ಗಡೆಹೊಂದುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
ಕಲಾವಿಭಾಗದಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ಜಮಖಂಡಿಯ ಬಿ.ಎಚ್.ಎಸ್. ಕಲಾ ಮತ್ತು ಟಿಜಿಪಿ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿ ಮಹಮ್ಮದ ಅಯಾನ ನದಾಫ್ 600ಕ್ಕೆ 595 ಅಂಕ ಪಡೆದು (ಪ್ರಥಮ) ಹಾಗೂ ರಾಜ್ಯಕ್ಕೆ 2ನೇ ಸ್ಥಾನ, ಬಾಗಲಕೋಟೆಯ ಶಂಕ್ರಪ್ಪ ಸಕ್ರೀ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ದ್ಯಾಮವ್ವ ಯಡಹಳ್ಳಿ 600ಕ್ಕೆ 594 ಅಂಕ ಪಡೆದು (ದ್ವಿತೀಯ) ಹಾಗೂ ರಾಜ್ಯಕ್ಕೆ ಎರಡನೇ ಸ್ಥಾನ, ತುಂಗಳ ಸರಕಾರಿ ಪದವಿ ಪೂರ್ವ ಕಾಲೇಜಿನ ಯೋಗಿತಾ ಸುರೇಂದ್ರ ಯಾದವ 600ಕ್ಕೆ 592 ಅಂಕ ಪಡೆದು (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ತೇರದಾಳ ಜೆವಿ ಮಂಡಳಿ ಪದವಿ ಪೂರ್ವ ಕಾಲೇಜಿನ ಸಂಗೀತಾ ಗಡದರ 600ಕ್ಕೆ 593 ಅಂಕ ಪಡೆದು (ಪ್ರಥಮ), ಇಲಕಲ್ಲಿನ ಗುರು ಚೈತನ್ಯ ಪದವಿ ಪೂರ್ವ ಕಾಲೇಜಿನ ವಾಣಿಶ್ರೀ ಆದಾಪೂರ 600ಕ್ಕೆ 592 ಅಂಕ ಪಡೆದು (ದ್ವೀತೀಯ) ಹಾಗೂ ಲೋಕಾಪೂರದ ಬಸವೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನ ಸೃಷ್ಠಿ ಉಪ್ಪಾರ 600ಕ್ಕೆ 589 ಅಂಕ ಪಡೆದು (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಹೆಚ್ಚು ಅಂಕ ಪಡೆದ ಬಾಗಲಕೋಟೆಯ ತುಂಗಳ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಶ್ರೇಯಾ ಯಾವಗಲ್ 600ಕ್ಕೆ 595 ಅಂಕ ಪಡೆದು (ಪ್ರಥಮ), ಬಾಗಲಕೋಟೆ ಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಾಕ್ಷಿ ಮಠಪತಿ 600ಕ್ಕೆ 593 ಅಂಕ ಹಾಗೂ ನವನಗರದ ತೇಜಸ್ ಅಂತರರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನ ತರುಣ ಕಕರಡ್ಡಿ 600ಕ್ಕೆ 593 ಅಂಕ ಪಡೆದು (ದ್ವಿತೀಯ) ಸ್ಥಾನ ಹಾಗೂ ಬೀಳಗಿ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ನಿಂಗಮ್ಮ ಬಿಸ್ತಗೊಂಡ, ಯಲ್ಲಟ್ಟಿ ಕೊಣ್ಣೂರ ವಿಜ್ಞಾನ ಪ.ಪೂ ಕಾಲೇಜಿನ ಐಶ್ವರ್ಯ ಕಬಾಡಗಿ ಹಾಗೂ ಮುಧೋಳ ವಾಗ್ದೇವಿ ವಿಕಾಸ ಪದವಿ ಪೂರ್ವ ಕಾಲೇಜಿನ ರಾಕೇಶ ಯಂಕಂಚಿ 600ಕ್ಕೆ 592 ಅಂಕ ಪಡೆದು (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಕಾಂಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ