ಮುಸ್ಲಿಂ ಮುಖಂಡರಿಂದ 2B ಮೀಸಲಾತಿ ಒತ್ತಾಯ, ಸಚಿವರಿಂದ ಭರವಸೆ
By Petkar media news desk| Bagalkot
ಬಾಗಲಕೋಟ:ಉಪಚುನಾವಣೆ ಪ್ರಚಾರದ ಭಾಗವಾಗಿ ಸಚಿವರಾದ ಸತೀಶ್ ಜಾರಕಿಹೊಳಿ, ಎಂ. ಬಿ. ಪಾಟೀಲ್, ರಹೀಮ್ ಖಾನ್ ಹಾಗೂ ನಸೀರ್ ಅಹಮ್ಮದ್ ಅವರು ಮುಸ್ಲಿಂ ಮುಖಂಡ ಜಾಫರ್ ಬೇಪಾರಿ ಅವರ ನಿವಾಸಕ್ಕೆ ಭೇಟಿ ನೀಡಿದರು.
ಈ ವೇಳೆ ಕರ್ನಾಟಕ ಮುಸ್ಲಿಂ ಯೂನಿಟಿ ರಾಜ್ಯಾಧ್ಯಕ್ಷ ಜಬ್ಬಾರ್ ಕಲಬುರ್ಗಿ ಅವರು ಮುಸ್ಲಿಂ ಸಮುದಾಯದ ಪ್ರಮುಖ ಬೇಡಿಕೆಯಾದ 4% 2B ಮೀಸಲಾತಿ ವಿಚಾರವನ್ನು ಸಚಿವರ ಗಮನಕ್ಕೆ ತಂದರು. ಜೊತೆಗೆ ಸ್ಥಳೀಯವಾಗಿ ಸಮುದಾಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನೂ ವಿವರಿಸಿದರು.
2023ರ ವಿಧಾನಸಭೆ ಚುನಾವಣೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ 2B ಮೀಸಲಾತಿ ಭರವಸೆಯನ್ನು ನೆನಪಿಸಿದ ಜಬ್ಬಾರ್ ಕಲಬುರ್ಗಿ, ಈ ವಿಷಯ ಇನ್ನೂ ಪರಿಹಾರ ಕಾಣದೆ ಬಾಕಿಯಿರುವುದಕ್ಕೆ ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ವಿಷಯವನ್ನು ಸರ್ಕಾರದ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ, ಮೀಸಲಾತಿ ಸೇರಿದಂತೆ ಸ್ಥಳೀಯ ಸಮಸ್ಯೆಗಳಿಗೂ ಶೀಘ್ರ ಪರಿಹಾರ ಕಂಡುಹಿಡಿಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ