ಮಧುರಚೆನ್ನ ಅನುಭಾವಿಯೊಂದಿಗೆ ಅನುಸಂಧಾನ ಏಕವ್ಯಕ್ತಿ ಕಿರು ನಾಟಕ ಪ್ರದರ್ಶನ

ಸಾರಸ್ವತ ಲೋಕಕ್ಕೆ ಮಧುರ ಚೆನ್ನರ ಕೊಡುಗೆ ಅನನ್ಯ : ಗಣೇಶ ಅಮೀನಗಡ

By PetkarMedia news desk| Bagalkot

ಬಾಗಲಕೋಟೆ: ಆಧುನಿಕ ಸಾಹಿತ್ಯದಲ್ಲಿ ಮಧುರಚೆನ್ನರಿಗಿಂತ ಶ್ರೇಷ್ಠ ಸಾಹಿತ್ಯ ಕೃಷಿ ಮಾಡಿದವರು ಬೇರೆ ಯಾರೂ ಇಲ್ಲ. ಕನ್ನಡ ಸಾಹಿತ್ಯದಲ್ಲಿ ಅನುಭಾವದ ಮಧುರತೆ ಕೇಳಿ ಬಂದಿದ್ದು ಮಧುರಚೆನ್ನರ ಕಾವ್ಯದಲ್ಲಿ ಎಂದು ರಂಗಕರ್ಮಿ ಗಣೇಶ ಅಮೀನಗಡ ಹೇಳಿದರು.


ಅವರು ಕವಿತಾ ಕಲಾ ತಂಡ ಮೈಸೂರು ಹಾಗೂ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಹಯೋಗದಲ್ಲಿ ಬಿ.ವಿ.ವಿ. ಸಂಘದ ನೂತನ ಸಭಾ ಭವನದಲ್ಲಿ ಗುರುವಾರ ಹಮ್ಮಿಕೊಂಡ  ಮಧುರಚೆನ್ನ ಅನುಭಾವಿಯೊಂದಿಗೆ ಅನುಸಂಧಾನ ಏಕವ್ಯಕ್ತಿ ನಾಟಕ ಪ್ರದರ್ಶನ ಸಮಾರಂಭದಲ್ಲಿ ಮಾತನಾಡಿದ ಅವರು ಆಧುನಿಕ ಸಾಹಿತ್ಯದಲ್ಲಿ ಮಧುರಚೆನ್ನರಿಗಿಂತ ಶ್ರೇಷ್ಠ ಸಾಹಿತ್ಯ ಕೃಷಿ ಮಾಡಿದವರು ಬೇರೆ ಯಾರೂ ಇಲ್ಲ. ಕನ್ನಡ ಸಾಹಿತ್ಯದಲ್ಲಿ ಅನುಭಾವದ ಮಧುರತೆ ಕೇಳಿ ಬಂದಿದ್ದು ಮಧುರಚೆನ್ನರ ಕಾವ್ಯದಲ್ಲಿ, ಲಿಪಿಶಾಸ್ತ್ರ, ಶಾಸನಶಾಸ್ತ್ರ , ಭಾμÁ ಶಾಸ್ತ್ರ , ವ್ಯಾಕರಣ ಶಾಸ್ತ್ರ , ಜ್ಯೋತಿಷ್ಯ ಶಾಸ್ತ್ರವನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅರ್ಥೈಸಿಕೊಂಡು ರಚಿಸಿದ ಕೀರ್ತಿ ಮಧುರಚೆನ್ನರಿಗೆ ಸಲ್ಲುತ್ತದೆ, ಇಪ್ಪತ್ತನೆ ಶತಮಾನದ ಸಾಹಿತ್ಯ ಲೋಕ ಕಂಡ ಮಹಾನ್ ಅಧ್ಯಾತ್ಮಿಕ ಕವಿ, ಮಧುರ ಚೆನ್ನರು ಕೇವಲ 50 ವರ್ಷ ಬದುಕಿದ್ದರೂ ವಿಶ್ವ ಶ್ರೇಷ್ಠ ಅನುಭಾವ ಸಾಹಿತಿಯಾಗಿ ಅಲೌಕಿಕ ವ್ಯಕ್ತಿಯಾಗಿದ್ದರು, ಆತ್ಮಕಥೆಗೆ ಕಾದಂಬರಿಯ ರೂಪ ಕೊಟ್ಟ ಶ್ರೇಯಸ್ಸು ಮಧುರಚೆನ್ನರಿಗೆ ಸಲ್ಲುತ್ತದೆ. ಸಾರಸ್ವತ ಲೋಕಕ್ಕೆ ಮಧುರಚೆನ್ನರು ನೀಡಿದ ಕೊಡುಗೆ ಅನುಪಮ. ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ಮಾಡಿದ ಮಧುರಚೆನ್ನರು ಒಬ್ಬ ಶ್ರೇಷ್ಠ ಅನುಭಾವಿ. ಕಾದಂಬರಿ ರೂಪದಲ್ಲಿ ಮೂಡಿ ಬಂದಿರುವ ಅವರ ಆತ್ಮಕಥೆ ಇದಕ್ಕೆ ಉತ್ತಮ ನಿದರ್ಶನವಾಗಿದೆ ಎಂದರು.

ಸಂಘದ ಆಡಳಿತಾಧಿಕಾರಿಯಾದ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಮಾತನಾಡಿ ಮಧುರ ಚೆನ್ನರ ಬದುಕಿನ ಇನ್ನೊಂದು ಆಯಾಮವೆಂದರೆ ಅವರ ಆಧ್ಯಾತ್ಮಿಕ ಸಾಧನೆ, *ಹನ್ನೆರಡು ತುಂಬಿಲ್ಲ ಕನ್ನಕ್ಕಿ ನಾನಂದು. ನನ್ನ ನಲ್ಲನ ಕತೆಗೆ ಮರುಳುಗೊಂಡೆ. ಇನ್ನೇನು ಹೇಳುವೆನು ಇಂದಿಗಿಪ್ಪತ್ತಾರು. ಈಸೊಂದು ದಿನಕರಗಿ ಗೊತ್ತುಗೊಂಡೆ* ಎಂದು ‘ನನ್ನನಲ್ಲ’ದಲ್ಲಿ ಮಧುರಚೆನ್ನರು ತಮ್ಮ ಆತ್ಮಕಥೆಯನ್ನು ಹೇಳಿಕೊಂಡಿದ್ದಾರೆ. ಅವರು ತಮ್ಮ ಹನ್ನೆರಡನೆಯ ವಯಸ್ಸಿನ ಸುಮಾರಿಗೆ ದೇವರನ್ನು ಕಾಣುವ ಹಂಬಲವುಳ್ಳವರಾದರು. ಸುಮಾರು ಹದಿನಾಲ್ಕು ವರ್ಷಗಳ ಸಾಧನೆಯಲ್ಲಿ ಹೋರಾಡಿ ಅವನನ್ನು ಅರಿತುಕೊಂಡರು. ಅನಂತರದಲ್ಲಿಯೂ ತಮ್ಮ ಸಾಧನೆಯನ್ನು ಮುಂದುವರೆಸಿದ ಅವರು ತಮ್ಮ ಧ್ಯೇಯವನ್ನು ಈಡೇರಿಸಿಕೊಂಡರು. ಅವರ ಆಧ್ಯಾತ್ಮಿಕ ಸಾಧನೆಯ ಕಥನ ಅವರ ಗದ್ಯಕೃತಿಗಳಾದ ‘ಪೂರ್ವರಂಗ’, ‘ಕಾಳರಾತ್ರಿ’, ‘ಬೆಳಗು’ ಮತ್ತು ‘ಆತ್ಮಸಂಶೋಧನೆ’ ಇವುಗಳಲ್ಲಿ ಮನೋಜ್ಞವಾಗಿ ಪ್ರಕಟಗೊಂಡಿದೆ ಎಂದರು.

ಮಧುರಚೆನ್ನರ ಪುತ್ರ ಸತ್ಯಕಾಮ ಅವರ ಮಗ ಜಗದೇವ ಗಲಗಲಿ ಅವರು ತಮ್ಮ ಏಕವ್ಯಕ್ತಿ ನಾಟಕ ಪ್ರದರ್ಶನದಲ್ಲಿ ಕನ್ನಡ ನವೋದಯದ ಪ್ರಾರಂಭಿಕ ಕಾಲದಲ್ಲಿನ ಮಹತ್ವದ ಬರಹಗಾರರಾದ ಮಧುರಚೆನ್ನರು 1903ರ ಜುಲೈ 31ರಂದು ಜನಿಸಿದರು.  ಅವರು ಹುಟ್ಟಿದ ಊರು ಹಲಸಂಗಿಯ ನೆರೆ ಊರಾದ ಹಿರೇಲೋಣಿಯಾದರೂ ಅವರು ಬದುಕೆಲ್ಲ ಕಳೆದದ್ದು ಹಲಸಂಗಿಯಲ್ಲಿಯೇ.  ಅವರು 1921ರಲ್ಲಿ ಮುಲ್ಕೀ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದರಾದರೂ ಅವರ ಶಾಲೆಯ ಓದು ಅಲ್ಲಿಗೇ  ಮುಕ್ತಾಯಗೊಂಡಿತು.  ಅವರ ಸಂಶೋಧನೆ, ಜನಪದ ಸಾಹಿತ್ಯದ ಅಧ್ಯಯನ, ಆಧ್ಯಾತ್ಮಿಕ ಸಾಹಿತ್ಯದ ವ್ಯಾಸಂಗ, ಬಹುಭಾμÉಗಳ ಅಭ್ಯಾಸ ಮುಂತಾದವುಗಳೆಲ್ಲ ಅವರ ಅನನ್ಯವಾದ ಸಾಹಿತ್ಯೋಪಾಸನೆಯ ಪ್ರತೀಕಳನ್ನು ಪ್ರದರ್ಶಿಸಿಸುವ ಮೂಲಕ ಗಮನ ಸೇಳೆದರು. ಬಿ.ಆರ್ ಬನಸೋಡೆ ಅವರು ತಮ್ಮ ಸಾಂಧರ್ಬಿಕ ಹಾಡುಗಳನ್ನು ಹಾಡುವ ಮೂಲಕ ಏಕವ್ಯಕ್ತಿ ನಾಟಕ ಪ್ರದರ್ಶನಕ್ಕೆ ಜೀವ ತುಂಬಿದರು.

ನಾಟಕ ಪ್ರದರ್ಶನದಲ್ಲಿ ಬಿ.ವಿ.ವಿ.ಸಂಘದ ಆಡಳಿತಾಧಿಕಾರಿಯಾದ ವಿ.ಆರ್.ಶಿರೋಳ, ಪ್ರಸಾರ ರಂಗದ ವಿಭಾಗದ ನಿರ್ದೇಶಕರಾದ ಪಿ.ಎನ್.ಶಿಂಪಿ, ಕಾಲೇಜಿನ ಪ್ರಾಚಾರ್ಯ ಎಸ್.ಆರ್.ಮೂಗನೂರಮಠ ಸೇರಿದಂತೆ ಅನೇಕರು ಇದ್ದರು.


ಕಾಮೆಂಟ್‌ಗಳು