ಮಹಿಳೆಯರಿಗೆ ಹಕ್ಕು ಸಿಗಬಾರದು ಎಂಬುದೇ ಕಾಂಗ್ರೆಸ್ಸ ಅಜೆಂಡಾ : ಮಹಿಳೆಯರಿಗೆ ಮಾಡಿದ ಅನ್ಯಾಯ : ವೀರಣ್ಣ ಚರಂತಿಮಠ*
By PetkarMedia news Desk: Bagalkot
ಬಾಗಲಕೋಟೆ: ಮಹಿಳೆಯರಿಗೆ ಹಕ್ಕು ಸಿಗಬಾರದು ಎಂಬುದೇ ಕಾಂಗ್ರೆಸ್ ಅಜೆಂಡಾ. 33% ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಲು ದಶಕಗಳಿಂದ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್‍ನ ಅಸಲಿ ಮುಖ ಇಂದು ಮತ್ತೆ ಬಯಲಾಗಿದೆ ಇದು ಕಾಂಗ್ರೆಸ್ಸ ಮಹಿಳೆಯರಿಗೆ ಮಾಡಿದ ಅನ್ಯಾಯ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ನಗರದ ಬಸವೇಶ್ವರ ವೃತ್ತದಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದ ಮಹಿಳಾ ಮೋರ್ಚಾ ಹಮ್ಮಿಕೊಂಡ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಸೋಲಿಸಿ ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕಿದ ಕಾಂಗ್ರೆಸ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಜಾರಿಗೆ ತಂದ ಪ್ರತಿಯೊಂದು ಜನಪರ ಮತ್ತು ರಾಷ್ಟ್ರಹಿತದ ನಿರ್ಧಾರಗಳನ್ನು ಕಾಂಗ್ರೆಸ್ ವಿರೋಧಿಸುತ್ತಲೇ ಬಂದಿದೆ, ಮಹಿಳಾ ಸಬಲೀಕರಣಕ್ಕೆ ಕೊಡಲಿ ಪೆಟ್ಟು ಕೊಟ್ಟ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಧೋರಣೆಗೆ ದೇಶ ಸಾಕ್ಷಿಯಾಗಿದೆ. ಮಹಿಳೆಯರಿಗೆ ಹಕ್ಕು ಸಿಗಬಾರದು ಎಂಬುದೇ ಕಾಂಗ್ರೆಸ್ ಅಜೆಂಡಾ. 33% ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಲು ದಶಕಗಳಿಂದ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್‍ನ ಅಸಲಿ ಮುಖ ಇಂದು ಮತ್ತೆ ಬಯಲಾಗಿದೆ. ಇದು ಮಹಿಳೆಯರಿಗೆ ಮಾಡಿದ ಅನ್ಯಾಯ, ಕರ್ನಾಟಕದಲ್ಲಿ 28 ಸಂಸದರ ಸ್ಥಾನಗಳು 42 ಲೋಕಸಭಾ ಸ್ಥಾನಗಳಾಗುತ್ತಿದ್ದವು, ದೇಶದ ಇಂದಿನ ಜನಸಂಖ್ಯೆಗಣುವಾಗಿ ಲೋಕಸಭೆ 543 ಸಂಸದರ ಸ್ಥಾನಗಳ ಪೈಕಿ ಮಹಿಳೆಯರಿಗೆ 33% ಸ್ಥಾನ ನೀಡಿ 850 ಸಂಸದರ ಸ್ಥಾನಗಳನ್ನು ಹೆಚ್ಚು ಮಾಡುವ ಯೋಜನೆ ಹೊಂದಲಾಗಿತ್ತು, ಇಂದು ಕಾಂಗ್ರೇಸ್ಸ ಪಕ್ಷ ವೀರೋಧ ಮಾಡಿ ಮಹಿಳೆಯರ ಹಕ್ಕನ್ನು ಕಸಿದುಕೊಂಡಿದೆ, ಮುಂದಿನ ಯಾವುದೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಪಾಠ ಕಲಿಸುವ ಮೂಲಕ ಮಹಿಳಾ ಶಕ್ತಿಯನ್ನು ತೋರಿಸಬೇಕಿದೆ. ಮುಂದಿನ ದಿನಗಳಲ್ಲಿ ಪ್ರದಾನಿ ಮೋದಿಯವರು ಮಹಿಳೆಯರಿಗೆ 33% ಮಿಸಲಾತಿಯನ್ನು ತಂದೆ ತರುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಮಹಿಳಾ ಮೋರ್ಚಾದ ಅಧ್ಯಕ್ಷೆಯಾದ ಶಶಿಕಲಾ ಮಜ್ಜಗಿ ಮಾತನಾಡಿ ಮಹಿಳೆಯರ ಹಕ್ಕುಗಳು ಸಮಾಧಿಯಾಗುವುದನ್ನು ತನ್ನ ಜಯ ಎಂದು ಹೆಮ್ಮೆ ಪಡುವ ಕಾಂಗ್ರೆಸ್‍ನ ಮನಸ್ಥಿತಿ ಎಂತಹ ಕ್ರೂರ ಮನಸ್ಥಿತಿ ಇರಬೇಕು ? ಇದು ಕಾಂಗ್ರೆಸ್ಸಿಗರ ಮಹಿಳಾ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಅವರ ದೃಷ್ಟಿಯಲ್ಲಿ ಮಹಿಳೆಯರು ಕೇವಲ ಘೋಷಣೆಗಳಿಗೆ ಸೀಮಿತವಾಗಬೇಕೇ ಹೊರತು ಅಧಿಕಾರಕ್ಕೆ ಬರಬಾರದು ಎಂಬುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷದ ಈ ದ್ರೋಹವನ್ನು ಪ್ರತಿಯೊಬ್ಬ ಮಹಿಳೆಯೂ, ಪ್ರತಿಯೊಬ್ಬ ಪ್ರಜಾಪ್ರಭುತ್ವವಾದಿಯೂ ಖಂಡಿಸಬೇಕಿದೆ ಎಂದರು.
ಪ್ರತಿಭಟಣೆಯಲ್ಲಿ ಸವಿತಾ ಲಂಕೆನ್ನವರ, ಶೋಭಾ ರಾವ್, ಸುಜಾತಾ ಶಿಂಧೆ, ಸರಸ್ವತಿ ಕುರಬರ, ಶಿವಲೀಲಾ ಪಟ್ಟಣಶೆಟ್ಟಿ, ಸ್ಮೀತಾ ಪವಾರ, ಪ್ರೇಮಾ ಅಂಬಿಗೇರ, ಕಾವೇರಿ ರಾಠೋಡ, ವಿಜಯಲಕ್ಷ್ಮೀ ಬದ್ರಶೆಟ್ಟಿ, ನಾಗರತ್ನಾ ಒಕ್ಕಲಗುಂಟಿ, ಲಕ್ಷ್ಮೀ ಮಡಿವಾಳರ,ಜ್ಯೋತಿ ಚವ್ಹಾಣ, ರೇಖಾ ಕಲಬುರಗಿ, ದಾನವ್ವ ಕೋಟಿ, ಸಾವಿತ್ರಿ ಗಡ್ಡಿಮಠ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಶಿವಾನಂದ ಟವಳಿ, ಕಪ್ಪಯ್ಯ ಮುತ್ತಿನಮಠ, ಸುರೇಶ ಮಜ್ಜಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪ್ರತಿಭಟನಾ ರ್ಯಾಲಿ ಶಿವಾನಂದ ಜಿನ್ ನಿಂದ ಪ್ರಾರಂಭವಾಗಿ ಬಸವೇಶ್ವರ ವೃತ್ತದಲ್ಲಿ ಸಮಾರೋಭಗೊಂಡಿತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ