ಶ್ರೀ ದಿಗಂಬರೇಶ್ವರ ಮಠ ಜಾತ್ರಾ ಮಹೋತ್ಸವ – ಭಕ್ತಿ, ಸೇವೆ ಮತ್ತು ಸಂಪ್ರದಾಯದ ಮಹೋತ್ಸವ

ಶ್ರೀ ದಿಗಂಬರೇಶ್ವರ ಮಠ ಜಾತ್ರಾ ಮಹೋತ್ಸವ – ಭಕ್ತಿ, ಸೇವೆ ಮತ್ತು ಸಂಪ್ರದಾಯದ ಮಹೋತ್ಸವ

By PetkarMedia news Desk: Bagalkot

ಬಾಗಲಕೋಟೆ: “ಹರಿವ ಹಾವಿನ ಗಂಡ, ಉರಿವ ಕಿಚ್ಚಿನ ಗಂಡ, ಮೂರು ಲೋಕದ ಗಂಡ” ಎಂಬ ಬಿರುದಾಂಕಿತ ಸಿದ್ಧಿಪುರುಷರ ಪರಂಪರೆಯ ಶ್ರೀ ದಿಗಂಬರೇಶ್ವರ ಮಠಗಳು ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿವೆ. ಅವುಗಳಲ್ಲಿ ನವನಗರ ರಸ್ತೆಯಲ್ಲಿರುವ ಶ್ರೀ ದಿಗಂಬರೇಶ್ವರ ಮಠ ಪ್ರಮುಖವಾದುದು.

ಈ ಮಠವು ಶ್ರೀ ಬಸವರಾಜಪ್ಪನವರ ನೇತೃತ್ವದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿದೆ. ಬಾಗಲಕೋಟೆ, ವಿಜಯಪುರ, ಧಾರವಾಡ, ಹುಬ್ಬಳ್ಳಿ, ಬೆಂಗಳೂರು ಮತ್ತು ಮುಂಬೈವರೆಗೆ ಭಕ್ತರನ್ನು ಹೊಂದಿರುವ ಈ ಮಠ ಭಕ್ತರ ನಂಬಿಕೆಯ ಕೇಂದ್ರವಾಗಿದೆ.

ಮಠದಲ್ಲಿ ಶ್ರೀ ಹುಚ್ಚಪ್ಪಜ್ಜ, ಶ್ರೀ ದಿಗಂಬರೇಶ್ವರ (ಈಶ್ವರ), ಶ್ರೀಮಾತಾ ಕಪ್ಪರಪಡಿಯಮ್ಮ ದೇವಿ ಮೂರ್ತಿಗಳು ಪ್ರತಿಷ್ಠಾಪಿತವಾಗಿವೆ. ಇಲ್ಲಿ ನಡೆಯುವ ಪೂಜೆಗಳು, ಬಸವರಾಜಪ್ಪನವರ ನುಡಿಗಳು ಹಾಗೂ ಭವಿಷ್ಯವಾಣಿಗಳು ಭಕ್ತರಲ್ಲಿ ವಿಶೇಷ ಭಕ್ತಿಭಾವವನ್ನು ಹುಟ್ಟಿಸುತ್ತವೆ.

ಮಠಕ್ಕೆ ನಡೆದುಕೊಂಡರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ಗಾಢವಾಗಿದೆ.

ಶ್ರೀ ಬಸವರಾಜಪ್ಪನವರು ಮಠಕ್ಕಾಗಿ ಸುಮಾರು ಎರಡು ಎಕರೆ ಭೂಮಿಯನ್ನು ದಾನವಾಗಿ ನೀಡಿ, ತಾವೇ ಕೃಷಿ ಮಾಡಿಕೊಂಡು ಸೇವೆಯನ್ನು ಮುಂದುವರೆಸುತ್ತಿದ್ದಾರೆ. ಅವರ ಧರ್ಮಪತ್ನಿ ಲಕ್ಷ್ಮೀಬಾಯಿ ಅವರು ಅನ್ನಪೂರ್ಣೆಯಂತಿದ್ದು, ಮಠಕ್ಕೆ ಬರುವ ಭಕ್ತರಿಗೆ ಅನ್ನದ ಕೊರತೆ ಎಂದಿಗೂ ಇರುವುದಿಲ್ಲ.

📅 ಜಾತ್ರಾ ಮಹೋತ್ಸವ ಕಾರ್ಯಕ್ರಮ (ಏ.20 – ಏ.22)

🔸 ಏಪ್ರಿಲ್ 20 (ಸೋಮವಾರ)

ಬೆಳಗ್ಗೆ 5 ಗಂಟೆಗೆ ಕರ್ತು ಗದ್ದುಗೆ, ಉತ್ಸವ ಮೂರ್ತಿಗಳಿಗೆ ರುದ್ರಾಭಿಷೇಕ

ಗಣಾರಾಧನೆ

ಮಧ್ಯಾಹ್ನ 12:35ಕ್ಕೆ ಮಹಾಪ್ರಸಾದ

🔸 ಏಪ್ರಿಲ್ 21 (ಮಂಗಳವಾರ)

ಬೆಳಗ್ಗೆ 6ಕ್ಕೆ ಕರ್ತು ಗದ್ದುಗೆ, ಉತ್ಸವ ಮೂರ್ತಿ, ಪಲ್ಲಕ್ಕಿ, ತೇರು ಹಾಗೂ ನೂತನ ಅಶ್ವಕ್ಕೆ ಮಹಾಪೂಜೆ

ಮಧ್ಯಾಹ್ನ ಮಹಾಪ್ರಸಾದ

ಸಂಜೆ ಟಗರಿನ ಕಾಳಗ

🔸 ಏಪ್ರಿಲ್ 22 (ಬುಧವಾರ)

ಬೆಳಗ್ಗೆ 6ಕ್ಕೆ ಮಹಾಪೂಜೆ

ಮಧ್ಯಾಹ್ನ ಪ್ರಸಾದ

ಸಂಜೆ 5:45ಕ್ಕೆ ಉತ್ಸವ ಮೂರ್ತಿಗಳಿಗೆ ಪೂಜೆ

ತೇರಿನ ಕಳಸದ ಪ್ರತಿಷ್ಠಾಪನೆ

11ನೇ ವರ್ಷದ ಮಹಾರಥೋತ್ಸವ

✨ ಈ ಜಾತ್ರಾ ಮಹೋತ್ಸವದಲ್ಲಿ ಮಠಾಧೀಶರು, ಗಣ್ಯರು ಹಾಗೂ ಸಾವಿರಾರು ಭಕ್ತರು ಭಾಗಿಯಾಗಲಿದ್ದು,

ಶ್ರೀ ಬಸವರಾಜಪ್ಪನವರ ಕುರಿತ ಗ್ರಂಥ ಲೋಕಾರ್ಪಣೆ ಕೂಡ ನಡೆಯಲಿದೆ.

👉 ಭಕ್ತಿ, ನಂಬಿಕೆ ಮತ್ತು ಸಂಪ್ರದಾಯದ ಈ ಮಹೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ.

ಕಾಮೆಂಟ್‌ಗಳು