ಮುಳ್ಳೂರು–ಕಿರಸೂರಿನಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಕಾರ್ಯಕರ್ತರು

ಮುಳ್ಳೂರು–ಕಿರಸೂರಿನಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಕಾರ್ಯಕರ್ತರು

By PetkarMedia news desk: Bagalkot

ಬಾಗಲಕೋಟೆ: ಬಾಗಲಕೋಟ ಮತಕ್ಷೇತ್ರದ ಮುಳ್ಳೂರು ಗ್ರಾಮದಲ್ಲಿ   ಸುಮಾರು 20ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಪಕ್ಷ ತೊರೆದು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.


ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸಂಗಣ್ಣ ಹಂಡಿ ಮಾತನಾಡಿ, “ಪಕ್ಷ ಬಿಟ್ಟು ಹೋದ ಕಾರ್ಯಕರ್ತರನ್ನು ಮರಳಿ ಪಕ್ಷಕ್ಕೆ ಕರೆತರುವ ಕೆಲಸವನ್ನು ಮಾಡಿದ್ದೇವೆ. ಬಿಜೆಪಿ ಸೇರಿದ್ದ ಕಾರ್ಯಕರ್ತರು ತಮ್ಮ ನಿರ್ಧಾರ ತಪ್ಪಾಗಿದೆ ಎಂದು ಅರಿತು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ,” ಎಂದು ಹೇಳಿದರು

“ಕಾರ್ಯಕರ್ತರು ಸ್ವತಃ ನನ್ನನ್ನು ಸಂಪರ್ಕಿಸಿ, ಬಿಜೆಪಿ ಸೇರ್ಪಡೆ ಆಗಿದ್ದು ತಪ್ಪಾಗಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ತತ್ವಗಳು ಹಾಗೂ ಜನಪರ ಯೋಜನೆಗಳನ್ನು ಗಮನಿಸಿ ಅವರು ಮತ್ತೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ,” ಎಂದು ಅವರು ತಿಳಿಸಿದರು.


ಪಕ್ಷಕ್ಕೆ ಸೇರ್ಪಡೆಯಾದವರಲ್ಲಿ ಗ್ಯಾನಪ್ಪ ಬಿಸನಾಳ, ಹಣಮಪ್ಪ ಆಸಾಂಗಿ, ಪರಸಪ್ಪ ದೇವರಮನಿ, ಬೈಲಪ್ಪ ಆಸಾಂಗಿ, ಜುಮಣ್ಣ ಕುರಿ, ಯಮನಪ್ಪ ಕುರಿ, ಈರಪ್ಪ ಕುರಿ, ಸಚಿನ್ ಕುರಿ, ಸಕ್ರಪ್ಪ ಬಿಸನಾಳ, ಲವಪ್ಪ ಮನ್ನಿಕೇರಿ, ಸಿದ್ದಪ್ಪ ಬಾದಾಮಿ, ಗುಂಡಪ್ಪ ಚೀಲಶಟ್ಟಿ, ಯಮನಪ್ಪ ಗೌಡರ, ಆಸಂಗೇಪ್ಪ ಕುರಿ, ರಾಮಣ್ಣ ಕುರಿ  ಹಾಗೂ ಕಿರಸೂರ ಗ್ರಾಮದ ಕೃಷ್ಣ ಕುರಹಟ್ಟಿ, ಸಚಿನ್ ಕುರಹಟ್ಟಿ, ಕರಿಯಪ್ಪ ಕರಡಿ, ಮುತಪ್ಪ ಹಾಲವರ, ಮಂಜು ಅಂಗಡಿ, ಸುನಿಲ ಕಪಲಿ, ಮುತಪ್ಪ ಕೇಲಾಡಿ, ಕೋನಪ್ಪ ಕುರಹಟ್ಟಿ, ಮಂಜುನಾಥ  ರಾಜನಾಳ, ಶಿವಪ್ಪ ಸೊಕಳಿ ಸೇರಿದಂತೆ ಇತರ ಕಾರ್ಯಕರ್ತರು ಸೇರಿದ್ದಾರೆ.ಈ ಸೇರ್ಪಡೆಯಿಂದ ಮುಳ್ಳೂರು  ಹಾಗೂ ಕಿರಸೂರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಸಿಕ್ಕಿದ್ದೆ.

ಈ ಸಂದರ್ಭದಲ್ಲಿ ಬಸವಂತಪ್ಪ ಮೇಟಿ, ಬಾಯಕ್ಕ ಮೇಟಿ, ಮುತಣ್ಣ ಮುಳ್ಳೂರು, ಬಸವಂತಪ್ಪ ಅಂಟ್ರದಾನಿ, ಸಿದ್ದು ಹೂಗಾರ, ಸಿದ್ದಣ್ಣ ತೇಜಿ, ಶಿವಾನಂದ ಅಬ್ಜಲಪುರ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು