ಹಾವು ಕಚ್ಚಿದ ಮಹಿಳೆಗೆ ಭೇಟಿ ನೀಡಿ ಸಹಾಯಧನ ನೀಡಿದ ಶಾಸಕ ಭೀಮಸೇನ ಬಿ ಚಿಮ್ಮನಕಟ್ಟಿ
By PetkarMedia news desk: badami
ಬಾದಾಮಿ: ತಾಲೂಕು ಅಡಗಲ್ಲ ಗ್ರಾಮದ ಹಣಮವ್ವ ಬುದ್ಧವಂತಪ್ಪ ಅಸೂಟಿ ಎಂಬ ಮಹಿಳೆಗೆ ಹೊಲದಲ್ಲಿ ನಾಗರ ಹಾವು ಕಚ್ಚಿ ಗಂಭೀರ ಗಾಯಗಳಾಗಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳವಾರ ಶಾಸಕ ಭೀಮಸೇನ ಬಿ ಚಿಮ್ಮನಕಟ್ಟಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾನವೀಯತೆ ತೋರಿದ ಅವರು ವೈಯಕ್ತಿಕವಾಗಿ ಸಹಾಯಧನವನ್ನು ನೀಡಿದರು.
ಈ ಸಂದರ್ಭದಲ್ಲಿ ಕೋಣಪ್ಪ ಕಾಟನ್ನವರ ಸೇರಿದಂತೆ ಅಡಗಲ್ಲ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ