ಹೆಡ್ಲೈನ್:
ಬಾಗಲಕೋಟೆ ಪೊಲೀಸರ ಬೇಸಿಗೆ ಶಿಬಿರಕ್ಕೆ ಚಾಲನೆ – ಮಕ್ಕಳ ಸಮಗ್ರ ಅಭಿವೃದ್ಧಿಗೆ ಒತ್ತು
By PetkarMedia news desk:Bagalkot
ಬಾಗಲಕೋಟೆ: ಜಿಲ್ಲಾ ಪೊಲೀಸ್ ವತಿಯಿಂದ ನವನಗರದ ಧಾತ್ರಿ ಮಂಗಳ ಕಾರ್ಯಾಲಯದಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಮಕ್ಕಳಿಗಾಗಿ ಆಯೋಜಿಸಲಾದ ಬೇಸಿಗೆ ಶಿಬಿರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಚಾಲನೆ ನೀಡಿದರು.
ಏಪ್ರಿಲ್ 22 ರಿಂದ ಮೇ 7 ರವರೆಗೆ ನಡೆಯುವ ಈ ಶಿಬಿರವು ಮಕ್ಕಳ ಶಾರೀರಿಕ ಕ್ಷಮತೆ, ಸೃಜನಶೀಲತೆ, ನೈತಿಕ ಮೌಲ್ಯಗಳು ಮತ್ತು ಸಾಮಾಜಿಕ ಜಾಗೃತಿಯನ್ನು ಬೆಳೆಸುವ ಉದ್ದೇಶ ಹೊಂದಿದೆ.
ಈ ಶಿಬಿರದಲ್ಲಿ ಮಕ್ಕಳ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಹಲವು ಒಳಾಂಗಣ ಮತ್ತು ಹೊರಾಂಗಣ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಒಳಾಂಗಣ ಕಾರ್ಯಕ್ರಮಗಳಲ್ಲಿ ಪೆನ್ಸಿಲ್ ಡ್ರಾಯಿಂಗ್, ನೃತ್ಯ, ವಚನ, ನೈತಿಕ ಶಿಕ್ಷಣ, ಮೊಬೈಲ್ ಛಾಯಾಗ್ರಹಣ, ಪ್ರೇರಕ ಭಾಷಣಗಳು ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಜಾಗೃತಿ ಕಾರ್ಯಕ್ರಮಗಳು ಸೇರಿವೆ.
ಹೊರಾಂಗಣ ಚಟುವಟಿಕೆಗಳಾಗಿ ದೇಸಿ ಹಾಗೂ ವೃತ್ತಿಪರ ಕ್ರೀಡೆಗಳು, ಸೈಕ್ಲಿಂಗ್ ಸ್ಪರ್ಧೆ, ಚಿನ್ನಿ ದಾಂಡು, ಲಗೋರಿ, ಕ್ರಿಕೆಟ್, ಟೆನಿಕಾಯ್ಟ್, ಸ್ಕಿಪ್ಪಿಂಗ್, ಫುಟ್ಬಾಲ್ ಮತ್ತು ಬ್ಯಾಡ್ಮಿಂಟನ್ ಸೇರಿದಂತೆ ವಿವಿಧ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳ ಪ್ರತಿಭೆಯನ್ನು ಉತ್ತೇಜಿಸುವುದರ ಜೊತೆಗೆ ಅವರ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಗೆ ಬಾಗಲಕೋಟೆ ಜಿಲ್ಲಾ ಪೊಲೀಸರು ವಿಶೇಷ ಆದ್ಯತೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ