ರಜೆಗೆ ಬಂದಿದ್ದ ಯೋಧ ಹೃದಯಾಘಾತದಿಂದ ಸಾವು

ರಜೆಗೆ ಬಂದಿದ್ದ ಯೋಧ ಹೃದಯಾಘಾತದಿಂದ ಸಾವು

By PetkarMedia Desk: Bagalkot

ಬಾದಾಮಿ: ರಜೆಗೆ ಸ್ವಗ್ರಾಮಕ್ಕೆ ಬಂದಿದ್ದ ಯೋಧನೊರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ  ಶನಿವಾರ ರಾತ್ರಿ ನಡೆದಿದೆ.

ಯೋಧ ಮಾರುತಿ ಯಮನಪ್ಪ ದಳವಾಯಿ(38 ವರ್ಷ) ಮೃತಪಟ್ಟ ದುರ್ದೈವಿ. ಈತ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಸದರಿ ವ್ಯಕ್ತಿಯು ಮಿಲಿಟರಿ/ಝಾನ್ಸಿ/UP/ ಹವಾಲ್ದಾರ್ ಮೆಕ್ಯಾನಿಕಲ್ ಪುನಾ ರೆಜಿಮೆಂಟ್ ದಲ್ಲಿ ಸೇವೆ ಸಲ್ಲಿಸುತ್ತಿದ್ದರು.‌ ಸದರಿ ವ್ಯಕ್ತಿಯು ಸುಮಾರು ಹತ್ತು ದಿನದ ಹಿಂದೆ ರಜೆ ಮೇಲೆ ಗ್ರಾಮಕ್ಕೆ ಆಗಮಿಸಿದ್ದರು.‌ ಶನಿವಾರ ರಂದು ರಾತ್ರಿ 11.45 ಗಂಟೆಗೆ ಮನೆಯಲ್ಲಿ ಮಲಗಿಕೊಂಡಾಗ ಆ ಸಮಯದಲ್ಲಿ ಹೃದಯಘಾತ ಹೊಂದಿ ಆಕಸ್ಮಿಕವಾಗಿ ಮರಣ ಹೊಂದಿರುವದಾಗಿ ತಿಳಿದು ಬಂದಿದೆ. ರವಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ‌ಶಾಸಕರ ತಾಯಿ ರತ್ನಾಬಾಯಿ‌ ಚಿಮ್ಮನಕಟ್ಟಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.‌

ಕಾಮೆಂಟ್‌ಗಳು