ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ:ಪಟ್ಟಣಶೆಟ್ಟಿ
By PetkarMedia news desk: Badami
ಬಾದಾಮಿ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಕಲಾವಿದರಿಗೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಹೇಳಿದರು.
ಅವರು ಬುಧವಾರ ರಾತ್ರಿನಗರದ ಗ್ರಾಮ ದೇವತಾ ಉಡಿ ತುಂಬುವ ಕಾರ್ಯಕ್ರಮದ ನಿಮಿತ್ಯ ಶ್ರೀ ಪಾಂಡುರಂಗ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ "ಯಾಕವ್ವ ಗರತಿ ನನ್ಮಾಕ ಮರತಿ" ಎಂದು ಸಾಮಾಜಿಕ ನಾಟಕ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಭಾವಂತರಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ಹೇಳಿದರು.
ಮುಖಂಡ ಅಶೋಕ ಕೋಟನಕರ ಮಾತನಾಡಿ ನಾಟಕ ನೋಡುವವರ ಕಣ್ಣು ಉತ್ತಮವಾಗಿರಬೇಕು ಹಾಗೂ ಬಾದಾಮಿ ಗ್ರಾಮ ದೇವತಾ ಉತ್ಸವ ಸೇವಾ ಸಮಿತಿಯವರು ಭಕ್ತಿ ಭಾವದಿಂದ ಉಡಿ ತುಂಬುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಊರಿನ ಹಿರಿಯರಿಗೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ತಿಪ್ಪಣ್ಣ ನೀಲಗುಂದ, ಶಂಕ್ರಪ್ಪ ಗಾಣಿಗೇರ, ಮುತ್ತಪ್ಪ ವಾಲಿಕಾರ, ಕರಿಯಪ್ಪ ಜೂಲಕಟ್ಟಿ, ಲಕ್ಷ್ಮಣ ತಳವಾರ, ಅಡಿವೆಪ್ಪ ಅರಭೂತನವರ, ರಾಜಮಹಮ್ಮದ ಬಾಗವಾನ, ದುಂಡಪ್ಪ ಬಾರಕೇರ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ