ಶೀಗಿಕೆರಿಯಲ್ಲಿ ಯತ್ನಾಳ ಭರ್ಜರಿ ರೋಡ್ ಶೋ – ವೀರಣ್ಣ ಪರ ಮತಯಾಚನೆ, ಅಭಿಮಾನಿಗಳಿಂದ ಭಾರಿ

 ಶೀಗಿಕೆರಿಯಲ್ಲಿ ಯತ್ನಾಳ ಭರ್ಜರಿ ರೋಡ್ ಶೋ – ವೀರಣ್ಣ ಪರ ಮತಯಾಚನೆ, ಅಭಿಮಾನಿಗಳಿಂದ ಭಾರಿ

By PetkarMedia news desk: Bagalkot

ಬಾಗಲಕೋಟೆ: ಉಪಚುನಾವಣೆಯ ರಾಜಕೀಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರಚಾರ ಜೋರಾಗಿದೆ.

ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಶೀಗಿಕೆರಿ ಗ್ರಾಮದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಡಾ. ವೀರಣ್ಣ ಚರಂತಿಮಠ ಅವರ ಪರವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಈ ವೇಳೆ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಶೀಗಿಕೆರಿ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಪ್ರಚಾರದ ಸಮಯದಲ್ಲಿ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮುಖಂಡರು ಭಾಗವಹಿಸಿ ಹೂ ಮಳೆ ಸುರಿಸಿ, ಜೈಕಾರ ಕೂಗುವುದರ ಮೂಲಕ ಆತ್ಮೀಯ ಸ್ವಾಗತ ನೀಡಿದರು. ಕೆಲವರು ನೀರು, ಪಾನಕ, ಮಜ್ಜಿಗೆ ಹಾಗೂ ತಿಂಡಿ ನೀಡುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯತ್ನಾಳ ಅವರು, “ಜನರು ತೋರಿಸುತ್ತಿರುವ ಈ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಚಿರ ಋಣಿ” ಎಂದು ತಿಳಿಸಿದ್ದಾರೆ.

ಇದೇ ವೇಳೆ ರೋಡ್ ಶೋ ಸಮಯದಲ್ಲಿ ಆಂಬುಲೆನ್ಸ್ ಮತ್ತು ತುರ್ತು ಸೇವಾ ವಾಹನಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು, ಸಾರಿಗೆ ವ್ಯವಸ್ಥೆಗೆ ತೊಂದರೆ ಉಂಟಾಗದಂತೆ ಸಹಕರಿಸಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು. ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೋರಿದರು.

ಕಾಮೆಂಟ್‌ಗಳು