ಬಾಗಲಕೋಟೆ ಜೈಲಿನಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಕುರಿತು ಜಾಗೃತಿ

ತಂಬಾಕು ಮುಕ್ತ ಜೀವನಕ್ಕೆ ಖೈದಿಗಳಿಗೆ ಕರೆ

By Petkarmedia news desk| bagalkot

ಬಾಗಲಕೋಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಜಿಲ್ಲಾ ಕಾರಾಗೃಹದ ಸಂಯುಕ್ತ ಸಹಯೋಗದಲ್ಲಿ ಖೈದಿಗಳಿಗೆ ತಂಬಾಕು ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮ ಶುಕ್ರವಾರ (ಏ.10) ಜಿಲ್ಲಾ ಕಾರಾಗೃಹದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಎಸ್.ಎನ್. ನಾಗೂಡ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ಸಲಹೆಗಾರ ಶಶಿಕಾಂತ ಕುಮಠಳ್ಳಿ ಅವರು ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು, ತಂಬಾಕು ನಿಯಂತ್ರಣ ಕಾಯ್ದೆ–2003ರ ನಿಯಮಗಳು ಹಾಗೂ ತಂಬಾಕು ವ್ಯಸನ ಮುಕ್ತ ಕೇಂದ್ರಗಳ ಸೇವೆಗಳ ಕುರಿತು ಖೈದಿಗಳಿಗೆ ಮಾಹಿತಿ ನೀಡಿದರು. ಜೈಲಿನಲ್ಲಿರುವ ಅವಧಿಯನ್ನು ತಂಬಾಕು ವ್ಯಸನದಿಂದ ಮುಕ್ತವಾಗಲು ಸದುಪಯೋಗಪಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂತೋಷ ಐಹೊಳೆ ವೀಕ್ಷಕರು, ಶುಶ್ರೂಕಾಧಿಕಾರಿ ಅಮೀರಪ್ಪ ಭದ್ರಣ್ಣ ಹಾಗೂ ಜಿಲ್ಲಾ ಕಾರಾಗೃಹದ ಸಿಬ್ಬಂದಿ ಉಪಸ್ಥಿತರಿದ್ದರು. ಒಟ್ಟು 98 ಖೈದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾಮೆಂಟ್‌ಗಳು