ತೋವಿವಿ ಉದ್ಯಾನಗಿರಿಯಲ್ಲಿ 3 ದಿನಗಳ ಮಾವು ಮೇಳಕ್ಕೆ ನಿರಾಣಿ ಚಾಲನೆ

100ಕ್ಕೂ ಹೆಚ್ಚು ಮಾವಿನ ತಳಿಗಳ ಪ್ರದರ್ಶನ – ರೈತರಿಗೆ ಉತ್ತೇಜನ, ನೇರ ಮಾರಾಟಕ್ಕೆ ವೇದಿಕೆ

By PetkarMedia news desk: Bagalkot

ಬಾಗಲಕೋಟೆ: ನವನಗರದಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉದ್ಯಾನಗಿರಿಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಮಾವು ಮೇಳಕ್ಕೆ ವಿಧಾನ ಪರಿಷತ್ ಸದಸ್ಯ Hanamanth Nirani ಚಾಲನೆ ನೀಡಿದರು. 


ವಿವಿಧ ಮಾವಿನ ತಳಿಗಳ ಪ್ರದರ್ಶನ ವೀಕ್ಷಿಸಿದ ಅವರು, ರೈತರಿಗೆ ಉತ್ತೇಜನ ನೀಡುವುದು ಹಾಗೂ ಗುಣಮಟ್ಟದ ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಮಾವು ಬೆಳೆಗೆ ಉತ್ತಮ ಅವಕಾಶಗಳಿದ್ದು, ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಗುಣಮಟ್ಟದ ಉತ್ಪಾದನೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು. ಮುಂದಿನ ದಿನಗಳಲ್ಲಿ ಮಾವು ನಿಗಮ ಹಾಗೂ ಮಾವು ಸಂಶೋಧನಾ ಕೇಂದ್ರ ಸ್ಥಾಪನೆ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದರು.

ಮೇಳದಲ್ಲಿ ರತ್ನಗಿರಿ, ದೇವಗಡ, ಅಮ್ರಪಲ್ಲಿ, ಸಿಂಧು, ನೀಲಂ, ತೋತಾಪುರಿ ಸೇರಿದಂತೆ 100ಕ್ಕೂ ಹೆಚ್ಚು ಮಾವಿನ ತಳಿಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಜೊತೆಗೆ ಮಾವಿನ ಜ್ಯಾಂ, ಜ್ಯೂಸ್, ಉಪ್ಪಿನಕಾಯಿ, ಪಲ್ಪ್ ಹಾಗೂ ಒಣಮಾವು ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳೂ ಜನರ ಗಮನ ಸೆಳೆದವು.

ಕಾಮೆಂಟ್‌ಗಳು