ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಸಾಧನೆಗೆ ಪಟ್ಟಣಶೆಟ್ಟಿ ಅಭಿನಂದನೆ

ಎಸ್ಎಸ್ಎಲ್ಸಿ  ಪರೀಕ್ಷೆ ಫಲಿತಾಂಶ ಸಾಧನೆಗೆ ಪಟ್ಟಣಶೆಟ್ಟಿ ಅಭಿನಂದನೆ

ಬಾಗಲಕೋಟ::  ಈ ಬಾರಿಯ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಅಲ್ಪಸಂಖ್ಯಾತ ಕಲ್ಯಾಣ  ಇಲಾಖೆಗೆ  ಒಳಪಟ್ಟಿರುವ  ವಸತಿ ಶಾಲೆಗಳ ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು   ಸಾಧನೆ ಮಾಡಿದ್ದಕ್ಕೆ ಜಿಲ್ಲಾ ಅಲ್ಪಸಂಖ್ಯಾತ   ಕಲ್ಯಾಣ ಅಧಿಕಾರಿ   ಶಿವಾನಂದ ಪಟ್ಟಣಶೆಟ್ಟಿ    ಅಭಿನಂದಿಸಿದ್ದಾರೆ .

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಒಳಪಟ್ಟಿರುವ ಮೌಲಾನ ಅಜಾದ್ ಮಾದರಿಯ ಶಾಲೆಗಳಾದ ಬಾದಾಮಿ ಜಮಖಂಡಿ   ಇಳಕಲ್   ಬನಹಟ್ಟಿ ಮುಧೋಳ್    ತೇರದಾಳ್ ಬೀಳಗಿ   ನವನಗರದ   ಎರಡು ಶಾಲೆಗಳು    ಸೇರಿದಂತೆ    ಈ ಎಲ್ಲ ಶಾಲೆಯ ವಿದ್ಯಾರ್ಥಿಗಳು  ಈ ಬಾರಿ    ನೂರಕ್ಕೆ    ನೂರರಷ್ಟು ಸಾಧನೆ      ಮಾಡಿದ್ದಾರೆ   ಅಲ್ಲದೆ ಎಪಿಜೆ   ಅಬ್ದುಲ್ ಕಲಾಂ ಸಿ.ಬಿ.ಎಸ್‌ ಸಿ  ಹಾಗೂ ಹುನಗುಂದ   ಬೀಳಗಿ   ಜಮಖಂಡಿ    ತೇರದಾಳದ ಅಲ್ಪಸಂಖ್ಯಾತರ   ಮುರಾರ್ಜಿ ದೇಸಾಯಿ  ಮೆಟ್ರಿಕ್ ಪೂರ್ವ   ವಸತಿ   ಶಾಲೆಯ ವಿದ್ಯಾರ್ಥಿಗಳು    ಮತ್ತು   ಜಿಲ್ಲೆಯ ಐದು ಅಲ್ಪಸಂಖ್ಯಾತ    ವಸತಿ ನಿಲಯದ   ವಿದ್ಯಾರ್ಥಿನಿ ವಿದ್ಯಾರ್ಥಿಗಳು    ನೂರಕ್ಕೆ ನೂರರಷ್ಟು ಸಾಧನೆ ಮಾಡಿದ್ದಾರೆ   ಈ ಬಾರಿ ಈ ಎಲ್ಲಾ ಶಾಲೆಗಳಿಗೆ ವಿಶೇಷ ಬೋಧನಾ ಕ್ರಮಕ್ಕೆ ಸೂಚಿಸಲಾಗಿತ್ತು   ಪ್ರತಿದಿನ ಒಂದು   ಶಾಲೆಗೆ   ಭೇಟಿ ನೀಡಿ ಅಲ್ಲಿಯ.  ವಿದ್ಯಾರ್ಥಿಗಳಿಗೆ ಹಾಗೂ    ಶಿಕ್ಷಕರಿಗೆ  ಎಸ್ ಎಸ್ ಎಲ್ ಸಿ  ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ    ಪಡೆಯಬೇಕೆಂಬ ಉತ್ಸಾಹ   ಮೂಡಿಸಿದ್ದರ ಫಲವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು   ತಮ್ಮ ನಿರೀಕ್ಷೆಗೆ   ತಕ್ಕಂತೆ ಈ ಬಾರಿ ಸಾಧನೆ   ಮಾಡಿದ್ದು ಸಂತಸ   ತಂದಿದೆ  ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳು