ದಕ್ಷಿಣ ಕಾಶಿ ಮಹಾಕೂಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ

ದಕ್ಷಿಣ ಕಾಶಿ ಮಹಾಕೂಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ

By PetkarMedia news Desk: badami

ಬಾಗಲಕೋಟೆ: ಬಾದಾಮಿ ಸಮೀಪದ “ದಕ್ಷಿಣ ಕಾಶಿ” ಎಂದೇ ಪ್ರಸಿದ್ಧಿಯಾಗಿರುವ Mahakuteshwara Temple ಗೆ ಅಧಿಕ ಮಾಸದ ಪ್ರಯುಕ್ತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆಯಲಾಯಿತು.

ಈ ಸಂದರ್ಭದಲ್ಲಿ ನಾಡಿನ ಜನತೆಗೆ ಸುಖ, ಶಾಂತಿ ಹಾಗೂ ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು. ಬಳಿಕ ದೇವಸ್ಥಾನ ಸಮಿತಿಯವರು ಆತ್ಮೀಯವಾಗಿ ಸತ್ಕರಿಸಿದ್ದು, ಅವರ ಆತಿಥ್ಯಕ್ಕೆ ಕೃತಜ್ಞತೆ ಸಲ್ಲಿಸಲಾಯಿತು.

ಮಹಾಕೂಟ ದೇವಾಲಯವು ಚಾಲುಕ್ಯರ ಕಾಲದ ಪ್ರಸಿದ್ಧ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿದ್ದು, ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಈ ಕ್ಷೇತ್ರವನ್ನು “ದಕ್ಷಿಣ ಕಾಶಿ” ಎಂದೂ ಕರೆಯಲಾಗುತ್ತದೆ. ಕ್ರಿ.ಶ. 6ರಿಂದ 7ನೇ ಶತಮಾನದಲ್ಲಿ ಬಾದಾಮಿಯ ಚಾಲುಕ್ಯ ರಾಜರು ಈ ದೇವಾಲಯವನ್ನು ನಿರ್ಮಿಸಿದ್ದಾರೆ.

ಒಂದೇ ಆವರಣದಲ್ಲಿ ಅನೇಕ ಶಿವಲಿಂಗಗಳು ಹಾಗೂ ಸಣ್ಣ ದೇವಾಲಯಗಳ ಗುಂಪು ಇರುವುದರಿಂದ ಈ ಕ್ಷೇತ್ರಕ್ಕೆ “ಮಹಾಕೂಟ” ಎಂಬ ಹೆಸರು ಬಂದಿದೆ.

ಕಾಮೆಂಟ್‌ಗಳು