ನಿಂಗಾಪುರ ಗ್ರಾಮದಲ್ಲಿ ಹರಕೆ ತೀರಿಸಿದ ಮಹಾದೇವಪ್ಪ ಸನವಗೋಳ
By PetkarMedia news desk: Bagalkot
ಬಾಗಲಕೋಟೆ: ಬಾಗಲಕೋಟೆ ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ಗ್ರಾಮದ ಆರಾಧ್ಯ ದೇವತೆಗಳಾದ ದುರಗಮ್ಮ ದೇವಿ ಹಾಗೂ ದಾಳಮ್ಮ ದೇವಿಗೆ ಮಹಾದೇವಪ್ಪ ಸನವಗೋಳ ಅವರು ಹರಕೆ ತೀರಿಸಿದರು.
ಉಪ ಚುನಾವಣೆಯ ಸಂದರ್ಭದಲ್ಲಿ ಬಾಗಲಕೋಟೆ ಮತಕ್ಷೇತ್ರದ ಅಭ್ಯರ್ಥಿಯಾಗಿದ್ದ ಶಾಸಕ ಉಮೇಶ್ ಮೇಟಿ ಅವರು ಗೆಲುವು ಸಾಧಿಸಬೇಕೆಂದು ದೇವಿಗೆ ಹರಕೆ ಹೊತ್ತಿದ್ದ ಮಹಾದೇವಪ್ಪ ಸನವಗೋಳ, ಇದೀಗ ಉಮೇಶ್ ಮೇಟಿ ಅವರು ಶಾಸಕರಾಗಿ ಆಯ್ಕೆಯಾದ ಹಿನ್ನೆಲೆ ತಮ್ಮ ಹರಕೆಯನ್ನು ನೆರವೇರಿಸಿದರು.ಶಾಸಕ ಉಮೇಶ್ ಮೇಟಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಆರತಿ ನೆರವೇರಿಸಲಾಯಿತು. ಈ ವೇಳೆ ಮಹಾದೇವಪ್ಪ ಸನವಗೋಳ ಅವರು ದೇವಿಗೆ ತಮ್ಮ ಹರಕೆಯನ್ನು ತೀರಿಸಿ ಭಕ್ತಿಭಾವ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ ಶಾಸಕ ಉಮೇಶ್ ಮೇಟಿ ಅವರಿಗೆ ಆತ್ಮೀಯ ಸ್ವಾಗತ ಕೋರಿದರು. ಗ್ರಾಮಸ್ಥರು ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಉಮೇಶ್ ಮೇಟಿ ಅವರು ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಶಾಸಕ ಉಮೇಶ್ ಮೇಟಿ ಅವರು ಗುಂಡನಪಲ್ಲೆ ಹಾಗೂ ಚಿನ್ನವಾಲಕೊಪ್ಪ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಗ್ರಾಮಸ್ಥರೊಂದಿಗೆ ಚರ್ಚಿಸಿ ಕುಡಿಯುವ ನೀರು, ರಸ್ತೆ ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಮಾಹಿತಿ ಪಡೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಬಸವಂತಪ್ಪ ಮೇಟಿ, ಮಲ್ಲಿಕಾರ್ಜುನ ಮೇಟಿ, ಪ್ರವೀಣ್ ಪಾಟೀಲ್, ಅಶೋಕ್ ಲಾಗಲೊಟಿ, ಗುರು ಅನಗವಾಡಿ, ಎಸ್.ಎನ್. ರಾಂಪುರ, ಲಕ್ಸಣ್ಣ ದಡ್ಡಿ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ