ಸಮಾಜ ಸೇವೆಯಿಂದ ವ್ಯಕ್ತಿಯ ಬದುಕು ಸಂತೃಪ್ತಿ : ನಂಜಯ್ಯನಮಠ

ಹೆಚ್.ಬಿ.ಗೊರವರ ಅವರ ಸಮಾಜ ಚಿಂತಕ ಅಭಿನಂದನ ಗ್ರಂಥ ಬಿಡುಗಡೆ

By PetkarMedia news desk: Bagalkot

ಬಾಗಲಕೋಟೆ : ಸಮಾಜ ಸುಧಾರಣೆಯಲ್ಲಿ ಪ್ರತಿಯೊಬ್ಬ ವ್ಯಕ್ತಿ ಪಾತ್ರ ಮುಖ್ಯವಾಗಿದೆ. ವ್ಯಕ್ತಿ ಸಮಾಜ ಋಣ ತಿರಿಸಲು ಸೇವೆಯಿಂದ ಸಾಧ್ಯವಿದೆ. ಸಮಾಜ ಸೇವೆಯಿಂದ ಸಂತೃಪ್ತಿ ಬದುಕು ರೂಪಗೊಳ್ಳುತ್ತದೆ ಎಂದು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್. ಜಿ. ನಂಜಯ್ಯನಮಠ ಅವರು ಹೇಳಿದರು.

ಅವರು ನವನಗರದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಬೆನಕಟ್ಟಿ ಗ್ರಾಮದ ನಿವೃತ್ತ ಕೃಷಿ ಅಧಿಕಾರಿ ಹಣಮಂತಗೌಡ ಭೀಮಪ್ಪ ಗೊರವರ ಅವರ 75ನೇ ಹುಟ್ಟು ಹಬ್ಬದ ಅಮೃತ ಮಹೋತ್ಸವ ಮತ್ತು ಸಮಾಜ ಚಿಂತಕ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು.  ವ್ಯಕ್ತಿಯು ಸೇವೆ ಮಾಡುತ್ತಾ ಸಾಗಿದರೆ ತಾವು ಮಾಡಿದ ಕೆಲಸ ಸಮಾಜಕ್ಕೆ ಸಮರ್ಪಿತವಾಗುತ್ತದೆ. ಸಾಹಿತ್ಯ ವಲಯದಲ್ಲಿ ಅಭಿನಂದನಾ ಗ್ರಂಥಗಳಿಂದ ವ್ಯಕ್ತಿಯ ಸೇವೆ ಮತ್ತು ಸಾಧನೆಗಳನ್ನು ದಾಖಲಿಸಿ ಮುಂದಿನ ಜನಾಂಗದವರಿಗೆ  ನೀಡುವ ಕಾರ್ಯ ಮಾಡುವುದು ಮಾದರಿಯಾಗಿದೆ ಎಂದರು.

ಪ್ರಧಾನ ಸಂಪಾದಕ ಪ್ರೊ. ವಾಯ್. ಎಂ. ಯಾಕೊಳ್ಳಿ ಮಾತನಾಡಿ ವ್ಯಕ್ತಿ ಸಮಾಜ ಜೀವಿಯಾಗಿ, ಸಮಾಜಕ್ಕೆ ಸಾಹಿತ್ಯ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಕಾರ್ಯಗಳ ಮಾಡುವ ಮೂಲಕ ಸಮಾಜಕ್ಕೆ ತನ್ನನ್ನು ತಾನು ಅರ್ಪಿಸಿಕೊಳ್ಳುವ ಜೀವನ ಮಾಡಿರುವ ಹೆಚ್. ಬಿ. ಗೊರವರ ಅವರ ಸೇವೆ ಅನನ್ಯವಾಗಿದೆ ಎಂದರು.

 


 ಸಂಶೋಧಕ ಪ್ರೊ. ಚಂದ್ರಶೇಖರ ಕಾಳನ್ನವರ ಸಮಾಜ ಚಿಂತಕ  ಗ್ರಂಥವನ್ನು ಅವಲೋಕನ ಮಾಡಿ  ಮಾತನಾಡಿ, ಸಮಾಜದ ಅಭಿನಂದನೆಗೆ ಅರ್ಹವಾದ ಹೆಚ್. ಬಿ. ಗೊರವರ ಅವರ ಕುಟುಂಬದ ಸಾಂಸ್ಕೃತಿಕ, ಸಂಪ್ರದಾಯ, ಪರಂಪರೆ ಮತ್ತು ಬೆನಕಟ್ಟಿ ಗ್ರಾಮದ ಗ್ರಾಮೀಣ ಪರಿಸರದ ಅಸ್ಮಿತೆ ಅಳವಡಿಸಿಕೊಂಡ ಇವರು ಸಾಮಾಜಿಕ ಸೇವೆ ಪ್ರತಿರೂಪವಾದ ಸಮಾಜ ಚಿಂತಕ ಅಭಿನಂದನಾ ಗ್ರಂಥವು ಮುಂದಿನ ಪೀಳಿಗಿಗೆ ಆಕರ ಗ್ರಂಥವಾಗಿದೆ ಎಂದು  ಹೇಳಿದರು

ಕೆಪಿಸಿಸಿ ಓಬಿಸಿ ರಾಜ್ಯ ಕಾರ್ಯದರ್ಶಿ  ಮಹೇಶ ಹೊಸಗೌಡರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಸೊಗಡಿನ ಹೆಚ್.ಬಿ.ಗೊರವರ ಬದುಕು ಸಾರ್ಥಕವಾಗಿದೆ ಎಂದರು.ಅಭಿನಂದನಾ ಸಮೀತಿ ಸಂಯೋಜಕರಾದ ಪಾಂಡುರಂಗ ಸಣ್ಣಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು

ಮುಖಂಡ ಸತ್ಯಪ್ಪ ಮೇಲನಾಡ,ಸಾಹಿತಿ ಕಿರಣ ಬಾಳಗೊಳ, ಕೃಷ್ಣ ಓಗೆನ್ನವರ,  ಬಸವರಾಜ ಅಂಟರತಾನಿ, ಗೀತಾ ದಾನಶೆಟ್ಟಿ,  ರಾಜು ಮನ್ನಿಕೇರಿ, ನಿವೃತ್ತ ಶಿಕ್ಷಣಾಧಿಕಾರಿ ನೀಲಪ್ಪ ಗೊರವರ ಮುಂತಾದವರಿದ್ದರು.


ಕಾಮೆಂಟ್‌ಗಳು