ಗ್ರಾಮ ಗ್ರಾಮಕ್ಕೂ ಭೇಟಿ ನೀಡಿ ಜನರಿಗೆ ಕೃತಜ್ಞತೆ ಸಲ್ಲಿಸಿದ ಶಾಸಕ ಉಮೇಶ್ ಮೇಟಿ
By PetkarMedia news desk: Bagalkot
ಬಾಗಲಕೋಟೆ, ಮೇ 18: ಉಪ ಚುನಾವಣೆಯಲ್ಲಿ ಜಯ ಸಾಧಿಸಿದ ಬಳಿಕ ಬಾಗಲಕೋಟೆ ಮತಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸುವ ಕಾರ್ಯಕ್ರಮದ ಅಂಗವಾಗಿ ಶಾಸಕ ಉಮೇಶ್ ಮೇಟಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜನರನ್ನು ಭೇಟಿ ಮಾಡಿ ಅಭಿನಂದನೆ ಸ್ವೀಕರಿಸಿದರು.
ಸುತಗುಂಡಾರ, ಹಂಡರಗಲ್ಲ, ಹಿರೇಮ್ಯಾಗೇರಿ, ಚಿಕ್ಕ ಮ್ಯಾಗೇರಿ, ಬೊಮ್ಮನಗಿ, ಡೋಮನಾಳ, ಮಂಕಣಿ, ನಾಗಸಂಪಿಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಶಾಸಕ ಉಮೇಶ್ ಮೇಟಿ ಅವರಿಗೆ ಗ್ರಾಮಸ್ಥರು ಭವ್ಯ ಸ್ವಾಗತ ಕೋರಿದರು. ಕೆಲ ಗ್ರಾಮಗಳಲ್ಲಿ ಎತ್ತಿನ ಬಂಡಿ ಮೆರವಣಿಗೆ ನಡೆಸಲಾಗಿದ್ದು, ಇನ್ನೂ ಕೆಲ ಕಡೆ ಮಹಿಳೆಯರು ಆರತಿ ಬೆಳಗಿ, ಹೂವು ಚೆಲ್ಲಿ ಸಂಭ್ರಮಿಸಿದರು. ಗ್ರಾಮಸ್ಥರು ಘೋಷಣೆಗಳನ್ನು ಕೂಗಿ ಶಾಸಕ ಉಮೇಶ್ ಮೇಟಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ಮಾತನಾಡಿದ ಶಾಸಕ ಉಮೇಶ್ ಮೇಟಿ, “ನಮ್ಮ ತಂದೆಯವರಿಗೆ ಹೇಗೆ ಮತ ನೀಡಿ ಗೆಲ್ಲಿಸಿ ತಂದಿದ್ದೀರೋ, ಅದೇ ರೀತಿ ನನ್ನನ್ನೂ ಆಶೀರ್ವಾದ ಮಾಡಿ ಗೆಲ್ಲಿಸಿದ್ದೀರಿ. ನಿಮ್ಮ ಈ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದಕ್ಕೆ ನಾನು ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ,” ಎಂದು ಹೇಳಿದರು.
“ನಿಮ್ಮ ಗ್ರಾಮಗಳ ಸಮಸ್ಯೆಗಳನ್ನು ಹೇಗೆ ನಮ್ಮ ತಂದೆಯವರೊಂದಿಗೆ ಹಂಚಿಕೊಳ್ಳುತ್ತಿದ್ದೀರೋ, ಅದೇ ರೀತಿ ನನ್ನ ಬಳಿಗೂ ಬಂದು ಚರ್ಚೆ ಮಾಡಿ. ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಜನರ ಸಹಕಾರ ಅತ್ಯಗತ್ಯವಾಗಿದೆ,” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಸವಂತಪ್ಪ ಮೇಟಿ, ಬಲರಾಮ ಪವರ್, ಮುದಕಪ್ಪ ಕೊಣ್ಣೂರ, ಮಲ್ಲಿಕಾರ್ಜುನ ಮೇಟಿ, ಶಶಿಕಾಂತ ಪೂಜಾರ, ಮುತಪ್ಪ ಹುಗ್ಗಿ, ಜಟ್ಟೆಪ್ಪ ಮಾದಾಪುರ, ಮಲ್ಲು ದ್ಯಾವನವರ, ಶಿವಪ್ಪ ನುಗ್ಲಿ, ತಿಪಣ್ಣ ತಿಮಸಾಗರ, ಹಣಮಂತ ಪೂಜಾರ, ಎಚ್.ಎನ್. ವಾಲಿಕಾರ, ಶಿವಾನಂದ ಅಫ್ಜಲಪುರ, ಚಂದಗೌಡ ಗೌಡರ, ನಿಂಗಗೌಡ ಕಲಬುರಗಿ, ಮಲಪ್ಪ ಬೆನಕಟ್ಟಿ, ಬಸವರಾಜ ಬುದ್ಯಾಳ ಹಾಗೂ ನಿಂಗನಗೌಡ ಗೌಡರ ಉಪಸ್ಥಿತರಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ