2 ವರ್ಷ 6 ತಿಂಗಳ ಬಾಲಕನಿಗೆ ರಾಷ್ಟ್ರೀಯ ಮಟ್ಟದ ಗೌರವ

ಮಹಾಲಿಂಗಪುರ: ಪಟ್ಟಣದ 2 ವರ್ಷ 6 ತಿಂಗಳ ಪ್ರಾಯದ ರವೀಂದ್ರ ಢಪಳಾಪುರ ತನ್ನ ಅಸಾಧಾರಣ ನೆನಪಿನ ಶಕ್ತಿಯಿಂದ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾನೆ. ಪ್ರತಿಷ್ಠಿತ India Book of Records ಸಂಸ್ಥೆಯು ಆತನಿಗೆ 'IBR Achiever' ಬಿರುದನ್ನು ನೀಡಿ ಗೌರವಿಸಿದೆ.

ಬಾಲಕ ರವೀಂದ್ರ ತನಗೆ ತೋರಿಸಲಾದ ವಿವಿಧ ಚಿತ್ರಗಳು ಹಾಗೂ ವಿಷಯಗಳನ್ನು ಅತ್ಯಂತ ವೇಗವಾಗಿ ಮತ್ತು ನಿಖರವಾಗಿ ಗುರುತಿಸಿ ಹೆಸರಿಸುವ ಮೂಲಕ ಈ ಸಾಧನೆ ಮಾಡಿದ್ದಾನೆ. ಆತನ ವಿಶಿಷ್ಟ ಜ್ಞಾಪಕ ಶಕ್ತಿಯನ್ನು ಗುರುತಿಸಿದ ಸಂಸ್ಥೆಯು 2026ರ ಜನವರಿ 28ರಂದು ಸಾಧನೆಯನ್ನು ಅಧಿಕೃತವಾಗಿ ದೃಢೀಕರಿಸಿದ್ದು, ಜೂನ್ 6ರಂದು ಪ್ರಮಾಣಪತ್ರ ಹಾಗೂ ಪದಕವನ್ನು ವಿತರಿಸಿದೆ.

ಈ ಸಾಧನೆಯಿಂದ ರವೀಂದ್ರ ಢಪಳಾಪುರ ಕುಟುಂಬ ಹಾಗೂ ಮಹಾಲಿಂಗಪುರ ಪಟ್ಟಣಕ್ಕೆ ಹೆಮ್ಮೆ ತಂದಿದ್ದಾನೆ.

ಕಾಮೆಂಟ್‌ಗಳು