ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಿ: ಶಾಸಕ ಉಮೇಶ್ ಮೇಟಿ*
By Petkar media news desk: Bagalkot
ಬಾಗಲಕೋಟೆ: ಜೂನ್ 9 ನಗರಸಭೆ ಬಾಗಲಕೋಟೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ರೂಪಲ್ಯಾಂಡ್ ಕಾಲೋನಿಯಲ್ಲಿ ಸಸಿ ನೆಡುವ ಮೂಲಕ ಮಂಗಳವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಉಮೇಶ್ ಮೇಟಿ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದ್ದು, ಹಸಿರು ಪರಿಸರ ನಿರ್ಮಾಣಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಸಿ ನೆಟ್ಟು ಅವುಗಳನ್ನು ಪೋಷಿಸಬೇಕು ಎಂದು ಕರೆ ನೀಡಿದರು. ಪರಿಸರ ಸಮತೋಲನ ಕಾಪಾಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ನಿರ್ಮಿಸಬೇಕಾಗಿದೆ ಎಂದು ಹೇಳಿದರು.
ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಪರಿಸರ ರಕ್ಷಣೆಯ ಬಗ್ಗೆ ನಿರಂತರ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಸಸಿ ನೆಡುವುದರ ಜೊತೆಗೆ ಅವುಗಳ ಸಂರಕ್ಷಣೆಗೆ ಎಲ್ಲರೂ ಆದ್ಯತೆ ನೀಡಬೇಕು ಎಂದು ಬಿಟಿಡಿ ಅಧ್ಯಕ್ಷ ಪ್ರಕಾಶ್ ತಪ್ಸಟ್ಟಿ ತಿಳಿಸಿದರು.ಈ ಸಂದರ್ಭದಲ್ಲಿ ಅಕ್ಬರ್ ಮುಲ್ಲಾ, ರಾಜು ಮಣಿಕೇರಿ, ಆಜಿಶಾಬ್ ದಂಡಿನ, ಮಂಜು ಬೀರನವರ, ಜಗದೀಶ್ ಮಾಲಾಪನಿ, ವಾಸಣ್ಣ ಆರ್ ನಗರಸಭೆ ಪೌರಾಯುಕ್ತರು, ಪರಿಸರ ಅಭಿಯಂತರ ಸತೀಶ್ ಕಜ್ಜಿದೋನಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಾರವಾನ್, ಕಿರಿಯ ಅಭಿಯಂತರ ನವಿದ್ ಖಾಜಿ, ರೂಪಲ್ಯಾಂಡ್ ಕಾಲೋನಿಯ ಮುಖಂಡರು, ನಗರಸಭೆಯ ಸಿಬ್ಬಂದಿ, ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ