ಉದ್ಯೋಗ ಮೇಳ : ೧೫ ರಂದು ನೇರ ಸಂದರ್ಶನ

ಉದ್ಯೋಗ ಮೇಳ : ೧೫ ರಂದು ನೇರ ಸಂದರ್ಶನ

By PetkarMedia news desk: Bagalkot

ಬಾಗಲಕೋಟೆ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಜೂನ್ ೧೫ ರಂದು ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೩ ಗಂಟೆವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.


  ಈ ನೇರ ಸಂದರ್ಶನದಲ್ಲಿ ಐಡಿಎಪ್‌ಸಿ ಫಸ್ಟ್ ಬ್ಯಾಂಕ್ ಭಾಗವಹಿಸಲಿದ್ದು, ಬಾಗಲಕೋಟೆ, ಮುಧೋಳ ಮತ್ತು ಬೀಳಗಿ ಬ್ರಾö್ಯಂಚ್‌ಗಳಿಗೆ ಅಸೋಶಿಯೇಟ್ ರಿಲೇಷನ್‌ಶಿಪ್ ಮ್ಯಾನೇಜರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. 

೧೯ ರಿಂದ ೨೮ ವಯೋಮಿತಿಯಲ್ಲಿರುವ ಯಾವುದೇ ಪದವೀಧರರು ಭಾಗವಹಿಸಬಹುದಾಗಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟಾ ಮತ್ತು ಮೂಲ ಅಂಕ ಪಟ್ಟಿಗಳ ಝರಾಕ್ಸ್ ಪ್ರತಿಗಳೊಂದಿಗೆ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂಸಂ.೦೮೩೫೪-೨೩೫೩೩೭ಗೆ ಸಂಪರ್ಕಿಸಬಹುದಾಗಿದೆ.



 

ಕಾಮೆಂಟ್‌ಗಳು