ಟೆಂಗಿನಮಠ-ಟೀಕಿನಮಠದ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ: ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಮರ್ಪಣೆ
By PetkarMedia news desk: Bagalkot
ಬಾಗಲಕೋಟೆ, ಟೆಂಗಿನಮಠ-ಟೀಕಿನಮಠದ ನಿರಂಜನ ಚರಪಟ್ಟಾಧಿಕಾರ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಚರಂತಿಮಠದ ಪ್ರಭುಮಹಾಸ್ವಾಮಿಗಳು, ದೇಶದಲ್ಲಿ ಅನ್ನ ಮತ್ತು ಜ್ಞಾನ ದಾಸೋಹದ ಮೂಲಕ ಬಡತನ ನಿವಾರಣೆಯಲ್ಲಿ ಮಠಮಾನ್ಯಗಳು ಹಾಗೂ ಶರಣರ ಸೇವೆ ಅನನ್ಯವಾಗಿದ್ದು, ಮಠಗಳು ಬಡಜನರ ಬದುಕಿಗೆ ಮಾರ್ಗದರ್ಶನ ನೀಡುವ ಜಾಗೃತಿಯ ತಾಣಗಳಾಗಿದ್ದು, ಭಾರತೀಯ ಸಂಸ್ಕøತಿ ಮತ್ತು ಧಾರ್ಮಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿವೆ ಎಂದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಟೀಕಿನಮಠದ ಕೊಡುಗೆ ಅಪಾರವಾಗಿದ್ದು, ನೈತಿಕ ಜೀವನಕ್ಕೆ ಧಾರ್ಮಿಕತೆಯ ಅವಶ್ಯಕತೆ ಇದೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ ಚರಪಟ್ಟಾಧಿಕಾರ ಸಮಾರಂಭವು ನಗರದ ಸಾಂಸ್ಕೃತಿಕ ಹಬ್ಬವಾಗಿ ರೂಪುಗೊಂಡಿದ್ದು, ಇಡೀ ನಗರ ಆಧ್ಯಾತ್ಮಿಕತೆಯತ್ತ ಮುಖಮಾಡಿತ್ತು ಎಂದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಸಾರ್ವಜನಿಕರ ಸಹಭಾಗಿತ್ವ ಮತ್ತು ಪಾರದರ್ಶಕ ನಿರ್ವಹಣೆಯೇ ಸಮಾರಂಭದ ಯಶಸ್ಸಿಗೆ ಕಾರಣವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಹಾಗೂ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಮಾತನಾಡಿ, ನವನಗರದಲ್ಲಿ ಟೆಂಗಿನಮಠ ಮತ್ತು ಟೀಕಿನಮಠದ ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲು ಸಿದ್ಧವಿದ್ದೇವೆ, ಶ್ರೀ ಮಠದ ಪರಂಪರೆಯು ಮುಂದುವರೆಯಲಿ ಎಂದರು.
ಕೆರೂರ ಚರಂತಿಮಠದ ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಭಕ್ತರ ತ್ಯಾಗ, ಸೇವೆ ಮತ್ತು ಧರ್ಮನಿμÉ್ಠಯೇ ಸಮಾರಂಭದ ಯಶಸ್ಸಿನ ಮೂಲ ಕಾರಣವಾಗಿದೆ ಎಂದರು.
ಟೀಕಿನಮಠದ ಪೂಜ್ಯ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಒಂದು ತಿಂಗಳ ಕಾಲ ನಡೆದ ಚರಪಟ್ಟಾಧಿಕಾರ ಮಹೋತ್ಸವವು ಬಾಗಲಕೋಟೆ ನಗರಕ್ಕೆ ವಿಶೇಷ ಸಾಂಸ್ಕೃತಿಕ ಕಳೆ ತಂದಿದ್ದು, ಮಠಗಳ ಬೆಳವಣಿಗೆಯಲ್ಲಿ ಭಕ್ತರ ಪಾತ್ರವೂ ಸ್ವಾಮಿಗಳμÉ್ಟೀ ಮಹತ್ವದ್ದಾಗಿದೆ ಎಂದು ಹೇಳಿದರು. ಅನ್ನ ಹಾಗೂ ಜ್ಞಾನ ದಾಸೋಹದ ಕೀರ್ತಿ ಬಾಗಲಕೋಟೆ ಜನತೆಗೆ ಸಲ್ಲುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಟೆಂಗಿನಮಠ-ಟೀಕಿನಮಠದ ನಿರಂಜನ ಚರಪಟ್ಟಾಧಿಕಾರ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಷತೆಯನ್ನು ಸಲ್ಲಿಸಲಾಯಿತು.
ವೇದಿಕೆ ಮೇಲೆ ಸಂಘದ ಗೌರವ ಕಾರ್ಯಧರ್ಶಿ ಮಹೇಶ ಅಥಣಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಜಿ.ಎನ್.ಪಾಟೀಲ ಉಪಸ್ಥಿತರಿದ್ದರು. ಟೆಂಗಿನಮಠ.ಟೀಕಿನಮಠ ಎಲ್ಲ ಸದ್ಭಕ್ತ ಮಂಡಳಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ