₹40 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಜಮಖಂಡಿ ಖಜಾನೆ ಅಧಿಕಾರಿಗಳು
ಪಿಂಚಣಿ, ನಿವೃತ್ತಿ ಉಪದಾನ ಜಮೆ ಮಾಡಲು ಲಂಚಕ್ಕೆ ಬೇಡಿಕೆ ಆರೋಪ
ಬಾಗಲಕೋಟೆ, ಜುಲೈ 27: ನಿವೃತ್ತಿ ನಂತರದ ಪಿಂಚಣಿ ಹಾಗೂ ನಿವೃತ್ತಿ ಉಪದಾನ ಸೇರಿದಂತೆ ಆರ್ಥಿಕ ಸೌಲಭ್ಯಗಳನ್ನು ಜಮೆ ಮಾಡಿಕೊಡಲು ₹40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಹಣ ಸ್ವೀಕರಿಸುವ ವೇಳೆ ಜಮಖಂಡಿಯ ಇಬ್ಬರು ಖಜಾನೆ ಇಲಾಖೆ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜಮಖಂಡಿ ನಿವಾಸಿ ಚೇತನ ತರತರಿ ಅವರು ಜುಲೈ 27ರಂದು ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಮ್ಮ ಮಾವನ ನಿವೃತ್ತಿಯ ನಂತರ ಬರುವ ಪಿಂಚಣಿ ಹಾಗೂ ನಿವೃತ್ತಿ ಉಪದಾನಗಳನ್ನು ಜಮೆ ಮಾಡಲು ಮತ್ತು ₹1,42,900 ಕಮ್ಯೂಟೇಶನ್ ಮೊತ್ತಕ್ಕೆ ಸಂಬಂಧಿಸಿದಂತೆ ಅರ್ಧದಷ್ಟು ಅಂದರೆ ಸುಮಾರು ₹70 ಸಾವಿರ ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದರು.
ಚೌಕಾಸಿಯ ಬಳಿಕ ₹40 ಸಾವಿರ ಲಂಚ ನೀಡುವಂತೆ ಬೇಡಿಕೆ ಇಡಲಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಜಮಖಂಡಿ ತಾಲೂಕು ಖಜಾನಾಧಿಕಾರಿ ಎಸ್.ಎಸ್. ಬಿರಾದಾರ ಹಾಗೂ ಖಜಾನೆ ಇಲಾಖೆಯ ವಿನಾಯಕ ಹೋನವಾಡ ಅವರು ₹40 ಸಾವಿರ ಲಂಚದ ಹಣ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.
ಕರ್ನಾಟಕ ಲೋಕಾಯುಕ್ತ ಬಾಗಲಕೋಟೆಯ ಡಿವೈಎಸ್ಪಿ ಸುರೇಶರೆಡ್ಡಿ ಎಂ.ಎಸ್. ಅವರ ಮಾರ್ಗದರ್ಶನದಲ್ಲಿ ಪಿಐ ವಿ.ಎನ್. ಕಡಿ, ಪಿಐ ಎಂ.ಬಿ. ಬಿರಾದಾರ, ಪಿಐ ಎನ್.ಆರ್. ಖಿಲಾರೆ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಕುರಿತು ಕರ್ನಾಟಕ ಲೋಕಾಯುಕ್ತ ಬಾಗಲಕೋಟೆ ಪೊಲೀಸ್ ಅಧೀಕ್ಷಕ ಎಂ.ಬಿ. ನಂದಗಾವಿ ಮಾಹಿತಿ ನೀಡಿದ್ದಾರೆ.
PetkarMedia | ಬಾಗಲಕೋಟೆ ಸುದ್ದಿ
#Bagalkot #Jamkhandi #Lokayukta #LokayuktaRaid #BriberyCase #BagalkotNews #KarnatakaNews #PetkarMedia
Fb descriptionhastg Parashu Petkar Fb page follow madu

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ