₹65 ಲಕ್ಷ ವೆಚ್ಚದ ವಿವಿಧ ಸಮುದಾಯ ಭವನ ಕಾಮಗಾರಿಗಳಿಗೆ ಶಾಸಕ ಉಮೇಶ್ ಮೇಟಿ ಭೂಮಿ ಪೂಜೆ
ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಉಮೇಶ್ ಮೇಟಿ ಅವರು ಶನಿವಾರ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಒಟ್ಟು ₹65 ಲಕ್ಷ ವೆಚ್ಚದ ವಿವಿಧ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ತಳಿಗಿಹಾಳ ಗ್ರಾಮದಲ್ಲಿ ಅಮೋಘಸಿದ್ದೇಶ್ವರ ಸಮುದಾಯ ಭವನ, ಸಿರಗುಂಪಿ ಗ್ರಾಮದಲ್ಲಿ ಬೀರಲಿಂಗೇಶ್ವರ ಸಮುದಾಯ ಭವನ, ಬೆನ್ನೂರು ಗ್ರಾಮದಲ್ಲಿ ಲಕ್ಕಮ್ಮದೇವಿ ಹಾಗೂ ವಾಲ್ಮೀಕಿ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಅಲ್ಲದೆ, ನೀಲಾನಗರ ತಾಂಡಾದಲ್ಲಿ ಬಂಜಾರ ಸಮಾಜದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಉಮೇಶ್ ಹೆಚ್. ಮೇಟಿ, "ಸಮುದಾಯ ಭವನಗಳು ಗ್ರಾಮೀಣ ಭಾಗದ ಜನರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಚಟುವಟಿಕೆಗಳಿಗೆ ಕೇಂದ್ರಬಿಂದುವಾಗಿವೆ. ಎಲ್ಲ ಸಮುದಾಯಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲೂ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ. ಜನರ ಸಹಕಾರದೊಂದಿಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗುವುದು," ಎಂದು ಹೇಳಿದರು.ಈ ಸಂದರ್ಭದಲ್ಲಿ ಬಸವಂತಪ್ಪ ಮೇಟಿ, ಎಸ್. ಎನ್. ರಾಂಪುರ, ವೈ. ವೈ. ತಿಮ್ಮಾಪುರ, ರಾಜಪ್ಪ ಪಟ್ನದ, ಈರಯ್ಯ ಹಿರೇಮಠ, ಮುತ್ತನಗೌಡ ಪಾಟೀಲ, ಮಾದೇವ ಹುಂಡೇಕರ್, ಸಿದ್ದಪ್ಪ ವಾಲೀಕಾರ, ಎಚ್. ಆರ್. ಮಳ್ಳಿ, ಮುತ್ತಪ್ಪ ಚಿಂಗಾರಿ, ರೇವಣಸಿದ್ದಪ್ಪ ಗಾಡದ, ಮಳೆಯಪ್ಪ ಬಾರಿಗಿಡದ, ಕಾಂಗ್ರೆಸ್ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ