ದೇಶದ ಅಖಂಡತೆಗೆ ಡಾ. ಶ್ಯಾಮಪ್ರಸಾದ್ ಮುಖರ್ಜಿ ಜೀವನ ಸಮರ್ಪಣೆ: ನಾರಾಯಣಸಾ ಬಾಂಡಗೆ*
ಬಾಗಲಕೋಟೆ, : ದೇಶದ ಅಖಂಡತೆ ಮತ್ತು ಏಕತೆಯನ್ನು ಕಾಪಾಡುವ ಉದ್ದೇಶದಿಂದ ತಮ್ಮ ಜೀವನವನ್ನೇ ಸಮರ್ಪಣೆ ಮಾಡಿದ ಮಹಾನ್ ನಾಯಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಹೇಳಿದರು.
ನಗರದ ಶಿವಾನಂದ ಜೈನದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದ ವತಿಯಿಂದ ಹಮ್ಮಿಕೊಂಡಿದ್ದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದವರು ಪಶ್ಚಿಮ ಬಂಗಾಳವು ಭಾರತದ ಅವಿಭಾಜ್ಯ ಅಂಗವಾಗಿ ಉಳಿಯುವಂತೆ ಮಾಡುವಲ್ಲಿ ಡಾ. ಮುಖರ್ಜಿ ಮಹತ್ವದ ಪಾತ್ರ ವಹಿಸಿದ್ದರು. ನಂತರ ಜಮ್ಮು-ಕಾಶ್ಮೀರವೂ ಭಾರತದ ಅವಿಭಾಜ್ಯ ಭಾಗವಾಗಿರಬೇಕು ಎಂಬ ದೃಢ ನಿಲುವಿನೊಂದಿಗೆ ಹೋರಾಟ ನಡೆಸಿದರು. ಸೆರೆವಾಸ ಮತ್ತು ಏಕಾಂತ ಜೀವನವೂ ಅವರ ಸಂಕಲ್ಪವನ್ನು ಕುಗ್ಗಿಸಲಿಲ್ಲ. ದೇಶದ ಏಕತೆಗಾಗಿ ಹೋರಾಡಿದ ಅವರ ತ್ಯಾಗವು ಇತಿಹಾಸದಲ್ಲಿ ರಾಷ್ಟ್ರೀಯ ಸ್ಮರಣೆಯ ಭಾಗವಾಗಿ ಉಳಿದಿದೆ ಎಂದ ಅವರು
ದೇಶ ವಿಭಜನೆಯ ನಂತರದ ಸಂಕಷ್ಟದ ಸಂದರ್ಭದಲ್ಲೂ ರಾಷ್ಟ್ರೀಯ ಏಕತೆಗಾಗಿ ಅವರು ಸಲ್ಲಿಸಿದ ಸೇವೆ ಮತ್ತು ತ್ಯಾಗ ಇಂದಿನ ಪೀಳಿಗೆಗೆ ಪ್ರೇರಣೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಾ. ಎಂ.ಎಸ್. ದಡ್ಡೆನ್ನವರ, ಬಸವರಾಜ ಯಂಕಂಚಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೇಟ್ಟ, ಸತ್ಯನಾರಾಯಣ ಹೆಮಾದ್ರಿ, ಶಶಿಕಲಾ ಮಜ್ಜಗಿ, ಸರಸ್ವತಿ ಕುರಬರ, ಶಿವಲೀಲಾ ಸಂಬಣ್ಣವರ, ವಿಜಯಲಕ್ಷ್ಮಿ ಆಚಾರ್, ಶಿವಾನಂದ ಟವಳಿ, ರಾಜು ರೇವಣಕರ, ಅಂಬಾಜಿ ಜೋಷಿ, ರವಿ ಧಾಮಜಿ, ರಾಜು ಮುದೆನೂರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ