ಜಿಲ್ಲಾಮಟ್ಟದ ಪತ್ರಿಕಾ ಪ್ರಶಸ್ತಿಗೆ ನಾಲ್ವರು ಪತ್ರಕರ್ತರು, ಓರ್ವ ಪತ್ರಿಕಾ ವಿತರಕಿ ಆಯ್ಕೆ
ಬಾಗಲಕೋಟೆ: ಪತ್ರಿಕಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಜಿಲ್ಲೆಯ ನಾಲ್ವರು ಪತ್ರಕರ್ತರು ಹಾಗೂ ಓರ್ವ ಪತ್ರಿಕಾ ವಿತರಕಿಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ 2026ನೇ ಸಾಲಿನ ಜಿಲ್ಲಾಮಟ್ಟದ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಜುಲೈ 31ರಂದು ನಡೆಯಲಿರುವ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ದಿ. ಶ್ರೀಶೈಲ ಅಂಗಡಿ ಅವರ ಸ್ಮರಣಾರ್ಥ ಕೊಡಮಾಡುವ ‘ಸಂಜೆದರ್ಶನ’ ಪ್ರಶಸ್ತಿಗೆ ಸಂಯುಕ್ತ ಕರ್ನಾಟಕ ವರದಿಗಾರ ಅಭಯ ಮನಗೂಳಿ (ಬಾಗಲಕೋಟೆ) ಆಯ್ಕೆಯಾಗಿದ್ದಾರೆ.
ದಿ. ಶರಣಬಸವರಾಜ ಎಸ್. ಜಿಗಜಿನ್ನಿ ಅವರ ಸ್ಮರಣಾರ್ಥ ನೀಡುವ ‘ಸತ್ಯಾಶ್ರಯ’ ಪ್ರಶಸ್ತಿಗೆ ವಿಜಯ ಕರ್ನಾಟಕ ವರದಿಗಾರ ಲಿಂಗರಾಜ ಚಿನಿವಾಲರ (ಬಾದಾಮಿ) ಆಯ್ಕೆಯಾಗಿದ್ದಾರೆ.
ದಿ. ರಾಮ ಮನಗೂಳಿ ಅವರ ಸ್ಮರಣಾರ್ಥ ಉಮೇಶ ಪೂಜಾರಿ ಅವರು ಕೊಡಮಾಡಿರುವ ‘ಸವಿನುಡಿ’ ಪ್ರಶಸ್ತಿಗೆ ಉದಯವಾಣಿ ವರದಿಗಾರ ಶ್ರೀಶೈಲ ಬಿರಾದಾರ್ (ಬಾಗಲಕೋಟೆ) ಆಯ್ಕೆಯಾಗಿದ್ದಾರೆ.
ದಿ. ಎನ್.ಎಚ್. ಶಾಲಗಾರ ಅವರ ಸ್ಮರಣಾರ್ಥ ಕೊಡಮಾಡುವ ‘ಸಮಾಜವೀರ’ ಪ್ರಶಸ್ತಿಗೆ ಸುದಿನ ಪತ್ರಿಕೆ ಸಂಪಾದಕ ಸುಭಾಸ ಹೊದ್ಲೂವರ (ಬಾಗಲಕೋಟೆ) ಆಯ್ಕೆಯಾಗಿದ್ದಾರೆ.
ಪತ್ರಿಕಾ ವಿತರಕಿಗೆ ‘ಕಾಯಕ ಪ್ರಶಸ್ತಿ’
ಈ ವರ್ಷದಿಂದ ಪತ್ರಿಕಾ ವಿತರಕರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದ್ದು, ಮಾತೋಶ್ರೀ ದಿ. ತಾಯಮ್ಮ ಕಲ್ಲಪ್ಪಗೌಡ ಬಿರಾದಾರ್ ಅವರ ಸ್ಮರಣಾರ್ಥ ಕೊಡಮಾಡುವ ‘ಕಾಯಕ ಪ್ರಶಸ್ತಿಗೆ’ ಶಿರೂರಿನ ಸಂಗನಬಸವ್ವ ಬಸಪ್ಪ ಡಾವಣಗೆರೆ ಅವರನ್ನು ಆಯ್ಕೆ ಮಾಡಲಾಗಿದೆ.
ಜುಲೈ 31ರಂದು ನಡೆಯುವ ಪತ್ರಿಕಾ ದಿನಾಚರಣೆಯಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಎಂ. ಗಾಣಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
PetkarMedia | ಕನ್ನಡ ಡಿಜಿಟಲ್ ಮೀಡಿಯಾ
ಬಾಗಲಕೋಟೆ: ಜಿಲ್ಲಾಮಟ್ಟದ ಪತ್ರಿಕಾ ಪ್ರಶಸ್ತಿಗೆ ನಾಲ್ವರು ಪತ್ರಕರ್ತರು, ಓರ್ವ ಪತ್ರಿಕಾ ವಿತರಕಿ ಆಯ್ಕೆ
#Bagalkot #JournalistsAward #PressDay2026 #BagalkotNews #Journalists #PetkarMedia #ಪತ್ರಿಕಾದಿನಾಚರಣೆ #ಬಾಗಲಕೋಟೆ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ