ಜಮಖಂಡಿ: ಕ್ಷೇತ್ರದ ನೀರಾವರಿ ಹಾಗೂ ಮುಳುಗಡೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಮಾಜಿ ಶಾಸಕ ಆನಂದ ಸಿದ್ದು ನ್ಯಾಮಗೌಡ ಅವರ ನೇತೃತ್ವದಲ್ಲಿ ನಿಯೋಗವು ಆಲಮಟ್ಟಿಯಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಪ್ರಮುಖ ಬೇಡಿಕೆಗಳು:
🔹 ಮರೆಗುದ್ದಿ ಏತ ನೀರಾವರಿ ಯೋಜನೆ: ಯೋಜನೆಯನ್ನು 2026-27ನೇ ಸಾಲಿನ ನಬಾರ್ಡ್ (NABARD) ಅನುದಾನದಲ್ಲಿ ಸೇರ್ಪಡೆಗೊಳಿಸಿ, ಶೀಘ್ರವಾಗಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು.
🔹 ಮುಳುಗಡೆ ಸಮಸ್ಯೆಗೆ ಶಾಶ್ವತ ಪರಿಹಾರ: ನಾಗನೂರ, ಸುರಪಾಲಿ ಹಾಗೂ ಕವಟಗಿ ಗ್ರಾಮಗಳಲ್ಲಿ ಎದುರಾಗುತ್ತಿರುವ ಮುಳುಗಡೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಲಾಯಿತು.
ಕ್ಷೇತ್ರದ ಈ ಪ್ರಮುಖ ಬೇಡಿಕೆಗಳು ಹಾಗೂ ಯೋಜನೆಗಳ ಅನುಷ್ಠಾನಕ್ಕೆ ಸಚಿವರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಲಾಗಿದೆ.
#Jamkhandi #AnandNyamagowda #RamalingaReddy #MareguddiLiftIrrigation #Bagalkot #BagalkotNews #Karnataka #Irrigation #NABARD #PetkarMedia #ParashuramPetkar


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ