ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಸಾವು; ಪತಿ ವಿರುದ್ಧ ಕೊಲೆ ಆರೋಪ

 

ಬಾಗಲಕೋಟೆ ಬ್ರೇಕಿಂಗ್: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಸಾವು; ಪತಿ ವಿರುದ್ಧ ಕೊಲೆ ಆರೋಪ

ಪತ್ನಿ ಉಸಿರುಗಟ್ಟಿ ಸಾಯುತ್ತಿರುವ ದೃಶ್ಯವನ್ನು ಪತಿಯೇ ವಿಡಿಯೋ ಮಾಡಿದ್ದಾನೆಂಬ ಆರೋಪ | ಪ್ರವೀಣ್ ಪೊಲೀಸರ ವಶಕ್ಕೆ

ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ 23 ವರ್ಷದ ವಿವಾಹಿತ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಧಾರುಣ ಘಟನೆ ವರದಿಯಾಗಿದೆ.

ಮೃತ ಮಹಿಳೆಯನ್ನು ಪ್ರಗತಿ ಅಲಿಯಾಸ್ ಭಾಗ್ಯಶ್ರೀ ಜಗಳೂರು (23) ಎಂದು ಗುರುತಿಸಲಾಗಿದೆ. ಪತಿ ಪ್ರವೀಣ್ ಜಗಳೂರು ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಒದ್ದಾಡುತ್ತಿರುವಾಗ ಪತಿ ಆಕೆಯನ್ನು ರಕ್ಷಿಸುವ ಬದಲು ವಿಡಿಯೋ ಮಾಡಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಅನೈತಿಕ ಸಂಬಂಧದ ವಿಚಾರಕ್ಕೆ ಸಂಬಂಧಿಸಿದ ಕೌಟುಂಬಿಕ ಕಲಹ ಘಟನೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ನಿಖರ ಕಾರಣ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.

ಪ್ರಗತಿ ಮತ್ತು ಪ್ರವೀಣ್ ಸುಮಾರು ಆರು ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ ಒಂದು ಗಂಡು ಮಗು ಇದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಬೀಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸೂಚನೆ: ಕೊಲೆ ಹಾಗೂ ಘಟನೆಯ ಹಿನ್ನೆಲೆಗೆ ಸಂಬಂಧಿಸಿದ ಆರೋಪಗಳು ತನಿಖೆಯ ಹಂತದಲ್ಲಿದ್ದು, ಪೊಲೀಸ್ ತನಿಖೆಯ ಬಳಿಕವೇ ನಿಖರ ಮಾಹಿತಿ ದೃಢಪಡಬೇಕಿದೆ.

PetkarMedia.com | ಸುದ್ದಿ • ಮಾಹಿತಿ • ನಂಬಿಕೆ

ಕಾಮೆಂಟ್‌ಗಳು