ಬಾದಾಮಿ ರೈಲು ನಿಲ್ದಾಣ ಅಭಿವೃದ್ಧಿಗೆ ಹೋರಾಟ ಸಮಿತಿಯಿಂದ ಸಚಿವರಿಗೆ ಮನವಿ
ಬಾದಾಮಿ: ಅಮೃತ ಭಾರತ ಯೋಜನೆಯಡಿ ಪುನರ್‌ಅಭಿವೃದ್ಧಿಗೊಂಡ ಬಾದಾಮಿ ರೈಲು ನಿಲ್ದಾಣ ಉದ್ಘಾಟನೆ ಸಂದರ್ಭದಲ್ಲಿ, ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿಯು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ್ ಹಾಗೂ ನೈರುತ್ಯ ರೈಲ್ವೆ ಹುಬ್ಬಳ್ಳಿ ಮಹಾಪ್ರಬಂಧಕರಿಗೆ ಮನವಿ ಸಲ್ಲಿಸಿತು.
ಮನವಿಯ ಪ್ರಮುಖ ಬೇಡಿಕೆಗಳು:
ಬಾದಾಮಿ ರೈಲು ನಿಲ್ದಾಣಕ್ಕೆ "ಇಮ್ಮಡಿ ಪುಲಿಕೇಶಿ ರೈಲು ನಿಲ್ದಾಣ" ಎಂದು ನಾಮಕರಣ ಮಾಡಬೇಕು.
ನಾಮಫಲಕಗಳಲ್ಲಿ ಕನ್ನಡ ಮತ್ತು ಹಿಂದಿಯಲ್ಲಿ ಇರುವ "ಬದಾಮಿ" ಪದವನ್ನು "ಬಾದಾಮಿ" ಎಂದು ತಿದ್ದುಪಡಿ ಮಾಡಬೇಕು.
ಹೊಸ ಹುಬ್ಬಳ್ಳಿ–ಸೋಲಾಪುರ ಮೆಮೊ ರೈಲು ಆರಂಭಿಸಬೇಕು.
ಯಶವಂತಪುರ–ಬಿಕಾನೇರ್ ಎಕ್ಸ್‌ಪ್ರೆಸ್ ರೈಲಿಗೆ ಬಾದಾಮಿಯಲ್ಲಿ ನಿಲುಗಡೆ ನೀಡಬೇಕು.
ಪ್ರವಾಸೋದ್ಯಮ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಗಿದೆ.
ಬಾದಾಮಿಯನ್ನು ವಿಶ್ವದರ್ಜೆಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಬೇಡಿಕೆಗಳನ್ನು ಸಲ್ಲಿಸಲಾಗಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ