ಬಾಗಲಕೋಟೆಯಲ್ಲಿ ಆ.23ರಂದು ‘ಕೊಳಲು.com(edy)’ ಹಾಸ್ಯ ನಾಟಕ ಪ್ರದರ್ಶನ

 ಬಾಗಲಕೋಟೆಯಲ್ಲಿ ಆ.23ರಂದು ‘ಕೊಳಲು.com(edy)’ ಹಾಸ್ಯ ನಾಟಕ ಪ್ರದರ್ಶನ

ಬಾಗಲಕೋಟೆ: ನಗರದ ನವನಗರದ ಕಲಾಭವನದಲ್ಲಿ ಆ.23ರಂದು ಸಂಜೆ 6.30ಕ್ಕೆ ಪಕ್ವಾನ್ ಸಮೂಹದ ನೇತೃತ್ವದಲ್ಲಿ ‘ಕೊಳಲು.com(edy)’ ಸಂಗೀತ–ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.

ನಾಟಕವನ್ನು ರಂಗಕರ್ಮಿ ಪವನ ಸೀಮಿಕೇರಿ ನಿರ್ದೇಶಿಸಿದ್ದಾರೆ. ಕಾರ್ಯಕ್ರಮದಲ್ಲಿ ಕಲಾವಿದರು ವಿವಿಧ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ನಾಟಕದ ಪ್ರದರ್ಶನಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲೆಯ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಪ್ರತಿ ವರ್ಷವೂ ಪಕ್ವಾನ್ ಸಮೂಹದ ವತಿಯಿಂದ ಒಂದಿಲ್ಲೊಂದು ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಈ ಬಾರಿ ಸಂಗೀತ ಮತ್ತು ಹಾಸ್ಯದ ಸಮ್ಮಿಲನದೊಂದಿಗೆ ‘ಕೊಳಲು.com(edy)’ ನಾಟಕವನ್ನು ಪ್ರಸ್ತುತಪಡಿಸಲಾಗುತ್ತಿದೆ.

ಕಾಮೆಂಟ್‌ಗಳು