ವಿಶ್ವ ಛಾಯಾಗ್ರಾಹಕರ ದಿನಾಚರಣೆ ಆಗಸ್ಟ್ 27ರಂದು
ಬಾಗಲಕೋಟೆ, ಆ.26: ಬಾಗಲಕೋಟೆ ತಾಲೂಕು ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘದ ಆಶ್ರಯದಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಆಗಸ್ಟ್ 27ರಂದು ಬೆಳಿಗ್ಗೆ 11 ಗಂಟೆಗೆ ನವನಗರದ ಸೆಕ್ಟರ್ ನಂ.5ರಲ್ಲಿರುವ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಜಿಲ್ಲೆಯ ಹಿರಿಯ ವರದಿಗಾರ ಶ್ರೀಶೈಲ್ ಬಿರಾದರ ಉದ್ಘಾಟಿಸಲಿದ್ದು, ಷೇರು ಮಾರುಕಟ್ಟೆ ಆರ್ಥಿಕ ಸಲಹೆಗಾರ ಮಂಜುನಾಥ ಬೆಂಬಳಗಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸಂಘದ ರಾಜ್ಯ ನಿರ್ದೇಶಕ ವಿಠ್ಠಲ್ ಹಿರೇಮಠ ಹಾಗೂ ಜಿಲ್ಲಾಧ್ಯಕ್ಷ ಜಗದೀಶ ಅಂಬಿಗೇರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘದ ತಾಲೂಕು ಅಧ್ಯಕ್ಷ ಚಂದ್ರು ಅಂಬಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ