ಸಚಿವನಾಗಬಾರದೆಂದು ಕೆಲವರು ಸಾಕಷ್ಟು ಪ್ರಯತ್ನ ಮಾಡಿದರು: ವಿಜಯಾನಂದ ಕಾಶಪ್ಪನವರ
ಬಾಗಲಕೋಟೆ: “ನಾನು ಸಚಿವನಾಗಬಾರದು ಎಂದು ಕೆಲವರು ಟಿವಿ, Facebook, Instagram, WhatsApp ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಸಾಕಷ್ಟು ಪ್ರಯತ್ನ ಮಾಡಿದರು. ಆದರೆ ನನ್ನ ಮೇಲೆ ವಿಶ್ವಾಸವಿಟ್ಟು, ನಾನು ಸಚಿವನಾಗಬೇಕು ಎಂದು ಮನದಾಳದಿಂದ ಹಾರೈಸಿದವರ ಪ್ರಾರ್ಥನೆ ಇಂದು ಫಲಿಸಿದೆ” ಎಂದು ನೂತನ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ರಾಜಕೀಯ ಪಯಣದಲ್ಲಿ ಬೆಂಬಲ ನೀಡಿದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಹಾರೈಕೆಯನ್ನು ಸ್ಮರಿಸಿದರು.
“ಪ್ರಯತ್ನಗಳು ಕೆಲವೊಮ್ಮೆ ವಿಫಲವಾಗಬಹುದು. ಆದರೆ ಆತ್ಮಸಾಕ್ಷಿಯಾಗಿ, ವಿಶ್ವಾಸದಿಂದ ಮಾಡಿದ ಪ್ರಾರ್ಥನೆ ಖಂಡಿತ ಯಶಸ್ವಿಯಾಗುತ್ತದೆ. ನನ್ನ ಪರವಾಗಿ ಪ್ರಾರ್ಥಿಸಿದ ಹಾಗೂ ಹಾರೈಸಿದ ಪ್ರತಿಯೊಬ್ಬರ ಆಶೀರ್ವಾದವೇ ಇಂದು ಈ ಸ್ಥಾನ ತಲುಪಲು ಕಾರಣವಾಗಿದೆ” ಎಂದು ಹೇಳಿದರು.
ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಬೆಂಬಲಿಗರಿಗೆ ಕಾಶಪ್ಪನವರ ಕೃತಜ್ಞತೆ ಸಲ್ಲಿಸಿ, “ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ” ಎಂದು ಮನವಿ ಮಾಡಿದರು.
ಸಚಿವ ಸ್ಥಾನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಚರ್ಚೆಗಳ ನಡುವೆಯೇ ಕಾಶಪ್ಪನವರ ನೀಡಿರುವ ಈ ಹೇಳಿಕೆ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
#VijayanandKashappanavar #ವಿಜಯಾನಂದಕಾಶಪ್ಪನವರ #BagalkotNews #Hunagund #KarnatakaPolitics #ParashuPetkar #PetkarMedia

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ