ಆಡಳಿತದ ಕಾಂಗ್ರೆಸ್ ಸರಕಾರ ರೈತ ವಿರೋಧಿ ರವಿಕುಮಾರ್ ಆರೋಪ

 ಕೆಂದೂರು ಕೆರೆಗೆ ವಿಪ ಮುಖ್ಯ ಸಚೇತಕ ಎನ್.ರವಿಕುಮಾರ್ ಭೇಟಿ 

ಬಾದಾಮಿ; ಜಿಲ್ಲೆಯಲ್ಲಿಯೆ ಬೃಹತ್ ಕೆರೆಯಾದ ತಾಲೂಕಿನ ಕೆಂದೂರು ಕೆರೆಗೆ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ ಹಾಗೂ  ಶಾಸಕರಾದ ಹನಮಂತ ನಿರಾಣಿ, ಪಿ.ಎಚ್.ಪೂಜಾರ, ರಾಯಭಾಗ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ತಂಡ ಭೇಟಿ ನೀಡಿ ಬರ ಅಧ್ಯಯನ ನಡೆಸಿದರು. 

   ಗುರುವಾರ ತಾಲೂಕಿನ ಕೆಂದೂರು ಕೆರೆಯನ್ನು ವೀಕ್ಷಣೆ ಮಾಡಿ ರೈತರ ಸಮಸ್ಯೆಯನ್ನು ಆಲಿಸಿದರು. ಕೆರೆಯ ಪ್ರದೇಶ ಮತ್ತು ನೀರಿನ ಮಟ್ಟ ಸೇರಿದಂತೆ ಮಾಹಿತಿಯನ್ನು ಪಡೆದ ಅವರು ನದಿಯಿಂದ ೫ಕೋಟಿ ಯೋಜನೆ ಚಿಕ್ಕ ಪೈಪ್ ಲೈನ್ ಮಾಡಿಸಿ ಕೈತೊಳೆದು ಬಿಟ್ಟಿದ್ದಾರೆ . ಎಂದು ಚಾಟಿ ಬೀಸಿದರು.

  ರೈತರು ಒಗ್ಗಟ್ಟಾಗಿ ನಿಮ್ಮ ಧ್ವನಿ ಹೊರಹೊಮ್ಮಬೇಕು. ಕೆಂದೂರ ಕೆರೆಯ ಅಭಿವೃದ್ಧಿಯಾದಲ್ಲಿ ಸುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿನ ರೈತರ ಜಮೀನುಗಳಿಗೆ ನೀರಾವರಿ ಹೆಚ್ಚಾಗುವ ಜತೆಗೆ ರೈತರ ಬಾಳು ಹಸನಾಗುವುದು. ಇದಕ್ಕೆ ನಿಮ್ಮೆಲ್ಲರ ಒಗ್ಗಟ್ಟಿಗೆ ನಾವು ಬದ್ಧರಾಗಿ ಬೆಂಬಲ ನೀಡಲಾಗುವುದು ಎಂದರು. 

  ಕೆಂದೂರ ಗ್ರಾಮದ ರೈತರು ಕೆರೆಗೆ ನೀರು ತುಂಬಿಸಿ ಅಂತರ್ಜಲ ಹೆಚ್ಚಿಸುವ ಕೆಲಸ ಯಾವುದೇ ಸರಕಾರದಿಂದ ನಡೆದಿಲ್ಲ ಎಂಬುದು ನಮ್ಮ ಗೋಳು ಇನ್ನಷ್ಟು ಗೋಳಾಡುವಂತೆ ಮಾಡಿದೆ. ಸಂಸದ, ಶಾಸಕರು ಯಾರೂ ರೈತರ ಪರ ಕೆಲಸ ಮಾಡುತ್ತಿಲ್ಲ ಎಂಬ ನೋವು ಹಲವು ವರ್ಷಗಳಿಂದಲೂ ಪರಿಹಾರ ಕಂಡಿಲ್ಲ. ಮಲಪ್ರಭಾ ನದಿ ನೀರು ಕೆರೆಗೆ ಸೇರಿದರೆ ಬಹಳಷ್ಟು ಅನುಕೂಲ ಕಲ್ಪಿಸುವ ಬೃಹತ್ ಯೋಜನೆ ರೂಪಿಸಿರಿ ಎಂದು ಆಗ್ರಹಿಸಿದರು.

 ತಾಲೂಕಿನ ವಿವಿಧ ಗ್ರಾಪಂ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ೨೦ ಕೋಟಿಗೂ ಅಧಿಕ ಹಣ ಹೂಳು ಎತ್ತುವಕ್ಕೆ ಕರ್ಚು ಮಾಡಲಾಗಿದೆ. ಆದರೆ ಯಾವದೊಂದು ಮುಳ್ಳುಕಂಟಿಯೂ ತಗೆದಿಲ್ಲ. ಇಲ್ಲಿಯ ಕಪ್ಪು ಮಣ್ಣು ಹೊಲಗಳಿಗೆ ಅಕ್ರಮವಾಗಿ ದಂಧೆಕೋರರು ಲೂಟಿ ಮಾಡುತ್ತಿದ್ದಾರೆ. ಯಾವದಕ್ಕೂ ತಡೆ ಇಲ್ಲದೆ ಅಭಿವೃದ್ದಿಯಾಗದೆ ಕೆರೆಯ ಹೆಸರಿನಲ್ಲಿ ಹೂಳೆತ್ತುವ ಬದಲು ಹಣ ಎತ್ತುವ ಕೆಲಸ ನಡೆಯುತ್ತಿದೆ ಎಂದು ರೈತರು ಆರೋಪಿಸಿದರು. 

  ರೈತ ವಿರೋಧಿ ಸರಕಾರ ಕಾಂಗ್ರೆಸ್ ಆಡಳಿತದ ಸರಕಾರ. ರೈತರಿಗೆ ಅನ್ಯಾಯ ಮಾಡುತ್ತಲೆ ಇದೆ. ರೈತವಿರೋಧಿಯನ್ನು ನಾವು ಸಹಿಸಲ್ಲ, ಆಡಗಲ್ಲ ಗ್ರಾಮದಿಂದ ಕೆಂದೂರವರೆಗೆ ಇರುವ ಕಾಲುವೆಯನ್ನು ದೊಡ್ಡದಾಗಿಸಿ ನೀರನ್ನು ಹರಿಬಿಡುವ ಕೆಲಸ ಆಗಬೇಕು. 

   ರೈತರು ಒಗ್ಗಟ್ಟು ಮೂಲಕ ವಿಧಾನಸಭಾ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದಲ್ಲಿ ನಮ್ಮ ಬೆಂಬಲವನ್ನು ನೀಡಲಾಗುವುದು ಎಂದು ರವಿಕುಮಾರ್ ಹೇಳಿದರು.

 ಈ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ತಾಲೂಕ ಮಂಡಲ ಅಧ್ಯಕ್ಷ ನಾಗರಾಜ ಕಾಚೆಟ್ಟಿ, ಬಸವರಾಜ ಯಂಕAಚಿ, ಮುತ್ತು ಉಳ್ಳಾಗಡ್ಡಿ, ಬೇಲೂರಪ್ಪ ವಡ್ಡರ, ಮಲ್ಲಯ್ಯ ಮೂಗನೂರಮಠ, ಹಾದಿಮನಿ, ಅಂಗಡಿ ಸೇರಿದಂತೆ ಗ್ರಾಮಸ್ಥರು ಇದ್ದರು. 

ಸಂಪುಟ ದರ್ಜೆಯ ಮಂತ್ರಿ ಆಗುತ್ತಿದ್ದಂತೆ ಜಿಲ್ಲೆಯಲ್ಲಿ ಬರ ವೀಕ್ಷಣೆ ಆರಂಭಿಸಿದರು. ಇವರದು ನಾಟಕೀಯ ಎಂಬುದು ಬಹಿರಂಗ ಸತ್ಯ. ರೈತರು ಮಳೆ ಇಲ್ಲದೆ ಬಿತ್ತಿದ ಬೀಜ ಮೊಳಕೆ ಒಡೆದಿಲ್ಲ. ಕೆಲ ರೈತರು ಬಿತ್ತನೆ ಮಾಡದೆ ಉಳಿದರು. ರೈತರು ಬರಗಾಲ ಎಂದು ಘೋಷಣೆ ಮಾಡಲು ಒತ್ತಾಯಿಸಿದರೂ ಗಣನೆಗೆ ಇಲ್ಲ ಆರಕಾರಕ್ಕೆ ಎಂದು ಟೀಕಿಸಿದರು. 

ಆಗ್ರಹ;  ಸಭೆಯಲ್ಲಿ ಕೆಲ ರೈತರ ಸಮಸ್ಯೆಗಳನ್ನು ಆಲಿಸಿದ ನಂತರ ಎನ್. ರವಿಕುಮಾರ ೧ ಎಕರೆಗೆ ೫೦ ಸಾವಿರ ರೂಪಾಯಿ ರೈತರ ಖಾತೆಗೆ ಜಮಾ ಮಾಡಬೇಕು. ರೈತರ ಸಾಲ ಮನ್ನಾ ಮಾಡಬೇಕು. ಬೆಳೆವಿಮೆಯ ಅವಧಿ ಮುಂದೂಡಿ, ಸರಕಾರವೇ ರೈತರ ವಿಮೆ ಪಾವತಿಸಬೇಕು ಎಂದು ಆಗ್ರಹಿಸಿದರು. 


ಕಾಮೆಂಟ್‌ಗಳು