ಮುಧೋಳ ತಾಲೂಕಿನ ಬರ ಪರಿಸ್ಥಿತಿ ವೀಕ್ಷಿಸಿದ ಸಚಿವ ಕಾಶಪ್ಪನವರ*

 *ಮುಧೋಳ ತಾಲೂಕಿನ ಬರ ಪರಿಸ್ಥಿತಿ ವೀಕ್ಷಿಸಿದ ಸಚಿವ ಕಾಶಪ್ಪನವರ*

ಬಾಗಲಕೋಟೆ, ಆಗಸ್ಟ 8: ಜಿಲ್ಲೆಯ ಬರ ಪರಿಸ್ಥಿತಿಯ ಅಧ್ಯಯನವನ್ನು ಮುಂದುವರಿಸಿದ ನೂತನ ಸಚಿವರಾದ ವಿಜಯಾನಂದ ಕಾಶಪ್ಪನವರ ಶನಿವಾರ ಮುಧೋಳ ತಾಲೂಕಿನ  ಮಲ್ಲಾಪೂರ ಹಾಗೂ ಜಾಡರರ ಅರಳಿಕಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಮಳೆಯ ಕೊರತೆಯಿಂದ ಹಾನಿಗೊಳಗಾದ ವಿವಿಧ ಬೆಳೆಗಳನ್ನು ಪರಿಶೀಲಿಸಿದರು.



          ಮಲ್ಲಾಪೂರ ಗ್ರಾಮದ ರೈತ ಮೌಲಾಸಾಬ ಮುಲ್ಲಾ ಅವರ ಜಮೀನಿನಲ್ಲಿ ಬೆಳೆಯಲಾದ ಈರುಳ್ಳಿ ಬೆಳೆ ಹಾಗೂ ಜಾಡರ ಅರಳಿಕಟ್ಟಿ ವ್ಯಾಪ್ತಿಯ ರೈತ ಪತ್ರಪ್ಪ ಹೊಸಕೋಟಿ ಅವರ ಜಮೀನಿನಲ್ಲಿ ಬೆಳೆಯಲಾದ ಹೆಸರು ಬೆಳೆ ಹಾನಿಯನ್ನು ಸಚಿವರು ಪರಿವೀಕ್ಷಣೆ ನಡೆಸಿ, ರೈತರಿಂದ ಮಾಹಿತಿ ಪಡೆದುಕೊಂಡರು.

          ಪರಿವೀಕ್ಷಣೆ ವೇಳೆ ಮುದೋಳ‌ ಶಾಸಕ ಹಾಗೂ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಅಧಿಕಾರಿಗಳಿಂದ‌ ಬೆಳೆ ಹಾನಿ ಮಾಹಿತಿ ಪಡೆದರು. ಈರುಳ್ಳಿ ಬೆಳೆಗೆ ಬೆಳೆವಿಮೆಗೆ ಒಳಪಡಿಸಲು ಅವಕಾಶವಿದ್ದು, ವಿಮೆಗೆ ಒಳಪಡಿಸಲು ರೈತರಿಗೆ ತಿಳಿಸಿದರು.

         ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ತೋಟಗಾರಿಕೆ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ ಅವರು ಹಾನಿಗೊಳಗಾದ ಬೆಳೆಗಳ ವಿವರವನ್ನು ಸಚಿವರಿಗೆ ಹಾಗೂ ಶಾಸಕರಿಗೆ ನೀಡಿದರು.

            ಭೇಟಿ ವೇಳೆ ಜಿಲ್ಲಾಧಿಕಾರಿ ಸಂಗಪ್ಪ, ಅಪರ‌ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿ.ಪಂ‌ ಉಪ‌ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಮುಧೋಳ‌ ತಹಶೀಲ್ದಾರ ಡಾ.ಚಿಕ್ಕಪ್ಪ ನಾಯಕ ಸೇರಿದಂತೆ ಕೃಷಿ, ತೋಟಗಾರಿಕೆ ಇಲಾಖೆಯ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು