ಪಾಮಲದಿನ್ನಿಯಲ್ಲಿ ಅದ್ಧೂರಿಯಾಗಿ ಜರುಗಿದ ದುರ್ಗಾದೇವಿ ಭಕ್ತಿ ಗೀತೆಯ ಚಿತ್ರೀಕರಣ
ಗೋಕಾಕ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿರುವ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಮಹಾಮಾತೆ ದುರ್ಗಮ್ಮನ ಭಕ್ತಿ ಗೀತೆಯ ಅದ್ಧೂರಿ ಚಿತ್ರೀಕರಣ ನಡೆಯಿತು.
ಭಕ್ತಿ ಗೀತೆಯ ಚಿತ್ರೀಕರಣದಲ್ಲಿ ಕಿಲಾಡಿ ಬಸು, ಶಿಲ್ಪಾ ಗೋಕಾಕ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದರು. ದೇವಿಯ ಪಾತ್ರವನ್ನು ಲಕ್ಷ್ಮೀ ಹರಿಜನ ನಿರ್ವಹಿಸಿದರು. ಚಿತ್ರಕ್ಕೆ ಓಂ ಸಂತಾ ನಿರ್ದೇಶನ ನೀಡಿದ್ದು, ಸಾಯಿ ಕಲಾವಿದ, ಗೋಕಾಕ ಅವರ ಛಾಯಾಗ್ರಹಣದಲ್ಲಿ ಚಿತ್ರೀಕರಣ ನಡೆಯಿತು.
ನಾರಾಯಣ ಹಣಮನ್ನವರ ಸಾಹಿತ್ಯ, ಈಶ್ವರ ಮಾಸ್ತರ ಹಾಗೂ ಸುಜಾತ ಆರ್ಯದಮಠ ಅವರ ಗಾಯನದಲ್ಲಿ ಭಕ್ತಿ ಗೀತೆ ಮೂಡಿಬಂದಿದೆ. ಎಚ್.ಕೆ. ಹಣಮಂತ, ವಿನಾಯಕ, ಎಂ. ಗೈಬು ಸೇರಿದಂತೆ ಹಲವರು ಚಿತ್ರೀಕರಣಕ್ಕೆ ಸಹಕರಿಸಿದರು.
ಈ ಸಂದರ್ಭದಲ್ಲಿ ಪಾಮಲದಿನ್ನಿ ಗ್ರಾಮ ಪಂಚಾಯಿತಿ ಸದಸ್ಯ ಮಾರುತಿ ಪ್ರಧಾನಿ, ಅರ್ಚಕ ವಿಠ್ಠಲ ನಾಯಿಕ, ಗೋಕಾಕ ತಾಲೂಕು ಪಂಚಾಯಿತಿ ಸದಸ್ಯ ಸಿದಪ್ಪ ಶಂಕರ ಸಂಪಗಾಂವ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬೀರಪ್ಪ ಡಮಾಜರ, ನ್ಯಾಯವಾದಿ ವಿಠ್ಠಲ ರಾಜಾಪೂರೆ, ಪಿಕೆಪಿಎಸ್ ಅಧ್ಯಕ್ಷ ಬಸಪ್ಪ ಕೌವಲಿ, ಗ್ರಾಮ ಪಂಚಾಯಿತಿ ಸದಸ್ಯ ಭೀಮಪ್ಪ ನೀಲಜಗಿ, ದೇವಸ್ಥಾನ ಸಮಿತಿ ಸದಸ್ಯ ಪಾಂಡುರಂಗ ಬೋಜಿ, ಸಿದ್ದಪ್ಪ ಸಂಪಗಾಂವ, ಯಲಪ್ಪ ಚಿಪ್ಪಲಕಟ್ಟಿ, ವಿಠ್ಠಲ ಹಣಮನ್ನವರ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಈ ಭಕ್ತಿ ಗೀತೆಯ ಚಿತ್ರೀಕರಣವು ಗ್ರಾಮಸ್ಥರು ಹಾಗೂ ಭಕ್ತರಲ್ಲಿ ವಿಶೇಷ ಉತ್ಸಾಹ ಮೂಡಿಸಿತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ