ಬಾಗಲಕೋಟೆಯಲ್ಲಿ ಎಬಿವಿಪಿಯಿಂದ ಭವ್ಯ ತಿರಂಗಾ ರ‍್ಯಾಲಿ
ಬಾಗಲಕೋಟೆ: ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬಾಗಲಕೋಟೆ ಘಟಕದ ವತಿಯಿಂದ ನಗರದಲ್ಲಿ ಭವ್ಯ ತಿರಂಗಾ ರ‍್ಯಾಲಿ ನಡೆಯಿತು.
ವಿದ್ಯಾಗಿರಿಯ ಇಂಡಿಪೆಂಡೆಂಟ್ ಪಿಯು ಕಾಲೇಜಿನಿಂದ ಆರಂಭಗೊಂಡ ರ‍್ಯಾಲಿಗೆ ಬಿವಿವಿಎಸ್ ಸಂಸ್ಥೆಯ ಅಧ್ಯಕ್ಷ ಡಾ. ವೀರಣ್ಣ ಚರಂತಿಮಠ ಚಾಲನೆ ನೀಡಿದರು. ರಾಷ್ಟ್ರಧ್ವಜ ಹಿಡಿದು ದೇಶಭಕ್ತಿ ಘೋಷಣೆಗಳೊಂದಿಗೆ 1,000ಕ್ಕೂ ಅಧಿಕ ವಿದ್ಯಾರ್ಥಿಗಳು ರ‍್ಯಾಲಿಯಲ್ಲಿ ಪಾಲ್ಗೊಂಡರು.
ಇಂಡಿಪೆಂಡೆಂಟ್ ಪಿಯು ಕಾಲೇಜು, 12ನೇ ಕ್ರಾಸ್, ಕಲಾದಗಿ ರಸ್ತೆ, 22ನೇ ಕ್ರಾಸ್ ಹಾಗೂ ಎಂಜಿನಿಯರಿಂಗ್ ಕಾಲೇಜು ವೃತ್ತದ ಮೂಲಕ ಸಾಗಿದ ರ‍್ಯಾಲಿ ವಿದ್ಯಾಗಿರಿ ಡಿಗ್ರಿ ಕಾಲೇಜಿನಲ್ಲಿ ಸಮಾಪ್ತಿಗೊಂಡಿತು.
ಯುವಜನರಲ್ಲಿ ದೇಶಭಕ್ತಿ, ರಾಷ್ಟ್ರೀಯ ಏಕತೆ ಹಾಗೂ ರಾಷ್ಟ್ರದ ಮೇಲಿನ ಗೌರವವನ್ನು ಹೆಚ್ಚಿಸುವ ಉದ್ದೇಶದಿಂದ ರ‍್ಯಾಲಿ ಆಯೋಜಿಸಲಾಗಿತ್ತು.
ಎಬಿವಿಪಿ ಬಾಗಲಕೋಟೆ ಜಿಲ್ಲಾ ಸಂಚಾಲಕ ವಿಪುಲ್ ಪೇಟಕರ್, ಮಾರುತಿ ಪಾಟೋಳಿ, ಬಸವರಾಜ ಕುಂಬಾರ, ವಿವೇಕ ತಳವಾರ, ಸುದರ್ಶನ, ಗುರುಸಿದ್ದರಾಜ್, ಬಸವರಾಜ್, ಪ್ರವೀಣ್, ತಪಾಶ್ಯ, ಸೌಂದರ್ಯ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.




ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ