ಚಿಣ್ಣರ ಭಕ್ತಿಗೆ ಸಾಕ್ಷಿಯಾದ ಗಣೇಶೋತ್ಸವ
ಬಾಗಲಕೋಟೆ: ನಗರದ ವಿದ್ಯಾಗಿರಿ ವಲಯದ ಕೈಗಾರಿಕಾ ವಸಾಹತು ಎದುರಿನ ಎ.ಬಿ.ಎಸ್. ಕಾಲೋನಿಯಲ್ಲಿ ಚಿಕ್ಕ ಮಕ್ಕಳು ಸರಳವಾಗಿ ಗಣೇಶೋತ್ಸವ ಆಚರಿಸಿದರು.
ಮಕ್ಕಳು ಬೆಳಿಗ್ಗೆ ಶ್ರೀ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಬಳಿಕ ಅದೇ ದಿನ ರಾತ್ರಿ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡುವ ಮೂಲಕ ಏಕದಿನ ಗಣೇಶೋತ್ಸವವನ್ನು ಆಚರಿಸಿದರು.
ಚಿಣ್ಣರು ಭಕ್ತಿಯಿಂದ ಗಣೇಶೋತ್ಸವ ಆಚರಿಸಿದ ದೃಶ್ಯ ಗಮನ ಸೆಳೆಯಿತು. ಮಕ್ಕಳಿಗೆ ಶ್ರೀ ಗಣೇಶನು ವಿದ್ಯೆ, ಬುದ್ಧಿ ಹಾಗೂ ಉತ್ತಮ ಆರೋಗ್ಯ ಕರುಣಿಸಲಿ ಎಂದು ಸ್ಥಳೀಯರು ಪ್ರಾರ್ಥಿಸಿದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ