ಪೌರಕಾರ್ಮಿಕರ ದಿನಾಚರಣೆ | ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ
ಬಾಗಲಕೋಟೆ : ನಗರವನ್ನು ಸ್ವಚ್ಚವಾಗಿ, ಆರೋಗ್ಯಕರವಾಗಿ ಹಾಗೂ ವಾಸಯೋಗ್ಯವಾಗಿಡುವಲ್ಲಿ ಪೌರಕಾರ್ಮಿಕ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ನಗರಸಭೆಯ ಸಭಾಭವನದಲ್ಲಿ ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಡಳಿತ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮವ£ನ್ನು ಉದ್ಘಾಟಿಸಿ ಮಾತನಾಡಿದ ಅವರು ಪೌರಕಾರ್ಮಿಕರು ಮಳೆ, ಬಿಸಿಲು, ಹಬ್ಬ-ರಜೆ ಎನ್ನದೆ ಕರ್ತವ್ಯ ನಿರ್ವಹಿಸಿ ಸ್ವಚ್ಛ ಪರಿಸರ ನಿರ್ಮಿಸುತ್ತಾರೆ. ಅವರ ಸೇವೆಯನ್ನು ಗೌರವಿಸುವುದರ ಜೊತೆಗೆ ಸುರಕ್ಷತೆ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆಗೆ ಅಗತ್ಯ ಆದ್ಯತೆ ನೀಡಬೇಕು ಎಂದರು.
ಪ್ರತಿದಿನ ಬೆಳಿಗ್ಗೆಯಿಂದಲೇ ನಗರ, ರಸ್ತೆ, ಚರಂಡಿ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಚತೆಗೆ ಶ್ರಮಿಸುವ ಪೌರಕಾರ್ಮಿಕರು, ನಾಗರಿಕರು ಎಸೆಯುವ ಕಸವನ್ನು ಸಂಗ್ರಹಿಸಿ ಸ್ವಚ್ಛ ಪರಿಸರ ನಿರ್ಮಿಸುವ ಕಾರ್ಯದಲ್ಲಿ ತೊಡಗಿರುತ್ತಾರೆ. ವೈದ್ಯರು ಕಾಯಿಲೆಗೆ ಚಿಕತ್ಸೆ ನೀಡಿದರೆ ಪೌರಕಾರ್ಮಿಕರು ಕಾಯಿಲೆ ಉಂಟಾಗದAತೆ ಸ್ವಚ್ಚ ಪರಿಸರ ನಿರ್ಮಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿರುತ್ತಾರೆ. ಹೀಗಾಗಿ ಅವರ ಸೇವೆಯನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ, ಸಮಾಜಕ್ಕೆ ಸಲ್ಲಿಸುವ ಮಹತ್ವದ ಸಾರ್ವಜನಿಕರ ಸೇವೆಯಾಗಿ ಗೌರವಿಸಬೇಕು ಎಂದು ತಿಳಿಸಿದರು.
ಪೌರಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಸಾಧನಗಳು, ಆರೋಗ್ಯ ತಪಾಸಣೆ, ತರಬೇತಿ, ವಿಮೆ, ವಸತಿ ಹಾಗೂ ಮಕ್ಕಳ ಶಿಕ್ಷಣಕ್ಕೆ ಅಗತ್ಯ ನೆರವು ದೊರೆಯುವಂತೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರ ಕುಟುಂಬಗಳ ತ್ಯಾಗವನ್ನೂ ಸಮಾಜ ಗೌರವಿಸಬೇಕು. ನಾಗರಿಕರು ಮನೆಯಿಂದಲೇ ಕಸ ವಿಂಗಡಿಸಿ ನೀಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದೆ ಪೌರಕಾರ್ಮಿಕರೊಂದಿಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕರಿಗಾಗಿ ನೀಡಲಾಗುವ ವಿಶೇಷ ಭತ್ಯೆಯ ಸೌಲಭ್ಯದ ಚೆಕ್ನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ ಎಂ, ನಗರಸಭೆ ಪೌರಾಯುಕ್ತ ಎಂ.ಎA.ಸಾರವಾನ, ತಾಲೂಕಾ ವೈದ್ಯಾಧಿಕಾರಿ ಡಾ.ಮಾಗಿ, ನಗರಾಭಿವೃದ್ದಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮನೋಜ ಹಾಗೂ ಜಿಲ್ಲಾ ಪೌರಕಾರ್ಮಿಕರ ಸಂಘದ ಅಧ್ಯಕ್ಷ ರಾಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ
ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ಹಮ್ಮಿಕೊಂಡ ವಿವಿಧ ಕ್ರೀಡೆಗಳಾದ ಹೆಣ್ಣು ಮಕ್ಕಳಿಗೆ ಮ್ಯೂಜಿಕಲ್ ಚೇರ್, ರಿಲೇ ಓಟ, ಶಾಟಪುಟ್. ಲೇಮನ್ ಸ್ಪೋನ್ ಆಟ, ೧೦೦ ಮೀಟರ್ ಓಟ ಹಾಗೂ ಪುರುಷರಿಗಾಗಿ ಹಮ್ಮಿಕೊಂಡ ೧೦೦ ಮೀಟರ್ ಓಟ, ಶಾಟ್ಪುಟ್, ವಾಲ್ಹಿಬಾಲ್, ರಿಲೇ ಓಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.


ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ