ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ, ಹೆಸರು, ಸೋಯಾಬಿನ್ ಖರೀದಿ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಟಾಸ್ಕಪೋರ್ಸ ಸಮಿತಿ ಸಭೆ

ಬಾಗಲಕೋಟೆ : ಪ್ರಸಕ್ತ ಸಾಲಿನ ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ, ಹೆಸರು ಕಾಳು ಹಾಗೂ ಸೋಯಾಬಿನ್ ಉತ್ಪನ್ನಗಳನ್ನು ಖರೀದಿಸಲು ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.


           ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ಟಾಸ್ಕಪೋರ್ಸ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಪ್ರತಿ ಕ್ವಿಂಟಲ್‍ಗೆ 8343 ರೂ.,  ಹೆಸರು ಪ್ರತಿ ಕ್ವಿಂಟಲ್‍ಗೆ 8,780 ರೂ,ಗಳಂತೆ ಪ್ರತಿ ಎಕರೆಗೆ 4 ಕ್ವಿಂಟಲ್‍ನಂತೆ ಒಬ್ಬ ರೈತರಿಂದ ಗರಿಷ್ಟ 20 ಕ್ವಿಂಟಲ್ ಖರೀದಿಸಲಾಗುತ್ತಿದೆ. ಸೋಯಾಬಿನ್ ಪ್ರತಿ ಕ್ವಿಂಟಲ್‍ಗೆ 5,708 ರೂ.ಗಳ ದರದಲ್ಲಿ ಪ್ರತಿ ಎಕರೆಗೆ 5 ಕ್ವಿಂಟಲ್‍ನಂತೆ ಒಬ್ಬ ರೈತರಿಂದ ಗರಿಷ್ಟ 25 ಕ್ವಿಂಟಲ್ ಖರೀದಿಸಲು ಪ್ರಮಾಣ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

          ಖರೀದಿ ಕೇಂದ್ರಗಳಲ್ಲಿ ರೈತರ ನೋಂದಣಿ ಕಾರ್ಯವು ಸರಕಾರದ ಆದೇಶದ ದಿನಾಂಕದಿಂದ 80 ದಿನಗಳವರೆಗೆ ಹಾಗೂ ಖರೀದಿ ಪ್ರಕ್ರಿಯೆಯು 90 ದಿನಗಳ ವರೆಗೆ ನಡೆಯಲಿದೆ. ನೋಂದಣಿ ಕಾರ್ಯದ ಜೊತೆಯಲ್ಲಿಯೇ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತಿದೆ. ರೈತರು ನೋಂದಣಿ ಮಾಡಿಕೊಳ್ಳುವ ಸಂದರ್ಭದಲ್ಲಿ ಆಧಾರ ಕಾರ್ಡ, ಪಹಣಿ ಪತ್ರಿಕೆ ಹಾಗೂ ಆಧಾರಗೆ ಲಿಂಕ್ ಆಗಿರುವ ರಾಷ್ಟ್ರೀಕೃತ ಬ್ಯಾಂಕ್ ಖಾತೆಯ ಪಾಸ್‍ಬುಕ್ ಪ್ರತಿ ಸಲ್ಲಿಸಬೇಕು. ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡು ಸೂರ್ಯಕಾಂತಿ, ಹೆಸರು ಹಾಗೂ ಸೋಯಾಬಿನ್ ಉತ್ಪನ್ನಗಳನ್ನು ಮಾರಾಟ ಮಾಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

            ಹೆಚ್ಚಿನ ಮಾಹಿತಿಗಾಗಿ ಸೂರ್ಯಕಾಂತಿ ಖರೀದಿ ಸಂಬಂಧ ಕರ್ನಾಟಕ ಸಹಕಾರ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ನಿಯಮಿತದ ಜಿಲ್ಲಾ ಶಾಖಾ ವ್ಯವಸ್ಥಾಕರ ಮೊನಂ.9900553063, ಸಹಾಯಕ ನಿರ್ದೇಶಕರು ಎಪಿಎಂಸಿ, ಬಾಗಲಕೋಟೆ ಮೊನಂ.9035353912, ಹೆಸರು ಮತ್ತು ಸೋಯಾಬಿನ್ ಉತ್ಪನ್ನಗಳಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯ ಶಾಖಾ ವ್ಯವಸ್ಥಾಪಕರ ಮೊನಂ.9449864458ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

           ಸಭೆಯಲ್ಲಿ ಕೃಷಿ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಹಾಯಕ ನಿರ್ದೇಶಕ ಬಿ.ಎಸ್.ಭಾವಿಹಾಳ, ಕಾರ್ಯದರ್ಶಿ ವಿ.ಡಿ.ಪಾಟೀಲ, ಬಾದಾಮಿ ತಾಲೂಕಿನ ಕಾರ್ಯದರ್ಶಿ ಆರ್.ಡಿ.ದಂಡೀನ ಸೇರಿದಂತೆ ರಾಜ್ಯ ಸರಕಾರ ಮಹಾ ಮಂಡಳಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

*ಸೂರ್ಯಕಾಂತಿ ಖರೀದಿ ಕೇಂದ್ರಗಳ ವಿವರ*

         ಬಾಗಲಕೋಟೆ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ, ಖಜ್ಜಿಡೋಣಿ (9901106360), ಟಿ.ಎ.ಪಿ.ಸಿ.ಎಂ.ಸಿ ಬಾಗಲಕೋಟೆ (7353861868), ಬಾದಾಮಿ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಕಗಲಗೊಂಬ (9611859963), ಕೆಂದೂರ (9480410494), ನಂದಿಕೇಶ್ವರ (7624951919), ಹೆಬ್ಬಳ್ಳಿ (9916270586), ಪಿ.ಕೆ.ಪಿ.ಎಸ್ ಕೆರೂರ (9972301729), ಟಿ.ಎ.ಪಿ.ಸಿ.ಎಂ.ಸಿ ಬಾದಾಮಿ (9008116746), ಮುಧೋಳ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಜುನ್ನೂರ (7022544942), ಬೀಳಗಿ (9632289239), ಟಿ.ಎ.ಪಿ.ಸಿಎಂ.ಎಸ್ ಬೀಳಗಿ (7019682890), ಹುನಗುಂದ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ಹುನಗುಂದ (9480262655), ಎಫ್‍ಪಿಓ ಸೂಳಿಭಾವಿ (9449762433), ಅಮೃತ ರೈತ ಉತ್ಪಾದಕ ಕಂಪನಿ ಅಮರಾವತಿ (8431057342), ಪಿ.ಕೆ.ಪಿ.ಎಸ್ ಅಮೀನಗಡ (9741352231), ಟಿ.ಎ.ಪಿ.ಸಿ.ಎಂ.ಎಸ್ ಜಮಖಂಡಿ (9448920992), ಇಲಕಲ್ಲ ತಾಲೂಕಿನ ಪಿ.ಕೆ.ಪಿ.ಎಸ್ ನಂದವಾಡಗಿ (9902377067), ಕರಡಿ (9110402689), ಇಳಕಲ್ಲ (9148365831), ಜಿ.ಎಫ್.ಪಿ.ಸಿ.ಎಲ್ ಇಳಕಲ್ಲ (8660203311).

*ಹೆಸರು ಮತ್ತು ಸೋಯಾಬಿನ್ ಖರೀದಿ ಕೇಂದ್ರಗಳ ವಿವರ*

          ಟಿ.ಎ.ಪಿ.ಸಿ.ಎಂ.ಎಸ್ ಬಾಗಲಕೋಟೆ (7353861868), ಪಿಕೆಪಿಎಸ್ ಹಳ್ಳೂರ (9901325201), ಬೆನಕಟ್ಟಿ (9740406918), ಬಾದಾಮಿ (9611358837), ಕೆರೂರ (9972301729), ಮುಧೋಳ ಪಿಎಫ್.ಓ ಸರ್ವಬಂದು (9844474344), ಟಿ.ಎ.ಪಿ.ಸಿ.ಎಂ.ಎಸ್ ಹುನಗುಂದ (9480262655), ಎಫ್‍ಪಿಓ ಸೂಳೇಭಾವಿ (9449762433), ಪಿಕೆಪಿಎಸ್ ಮುಗನೂರು (8310324070), ನಂದವಾಡಗಿ (9902377067), ಟಿ.ಎ.ಪಿ.ಸಿ.ಎಂ.ಎಸ್ ಜಮಖಂಡಿ (9448920992), ಎಫ್‍ಪಿಓ ತೊದಲಬಾಗಿ (9741998771), ಟಿ.ಎ.ಪಿ.ಸಿ.ಎಂ.ಎಸ್ ಬೀಳಗಿ (7019682890), ಪಿ.ಕೆ.ಪಿ.ಎಸ್ ಇಲಕಲ್ಲ (9148365831).

ಛಾಯಾಚಿತ್ರ ಲಗತ್ತಿಸಿದೆ. 1 ಮತ್ತು 2

ಕಾಮೆಂಟ್‌ಗಳು